ಭ್ರಷ್ಟಾಚಾರ ಹಗರಣ: ನೆತನ್ಯಾಹು ವಿಚಾರಣೆ

7

ಭ್ರಷ್ಟಾಚಾರ ಹಗರಣ: ನೆತನ್ಯಾಹು ವಿಚಾರಣೆ

Published:
Updated:
ಭ್ರಷ್ಟಾಚಾರ ಹಗರಣ: ನೆತನ್ಯಾಹು ವಿಚಾರಣೆ

ಜೆರುಸಲೇಂ: ಭ್ರಷ್ಟಾಚಾರ ಹಗರಣ ಸಂಬಂಧ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರನ್ನು ಪೊಲೀಸರು ಎರಡನೇ ಬಾರಿಗೆ ವಿಚಾರಣೆಗೆ ಒಳಪಡಿಸಿದರು.

ಇಸ್ರೇಲ್‌ನ ಬೆಝೆಕ್ ಟೆಲಿಕಾಂ ಕಂಪನಿಯ ವ್ಯವಹಾರಕ್ಕೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ರೂಪಿಸಿದ ಶಂಕೆಯ ಮೇಲೆ ನೆತನ್ಯಾಹು ಅವರ ಇಬ್ಬರು ಆಪ್ತರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ತನ್ನ ಖ್ಯಾತ ಜಾಲತಾಣ ‘ವಾಲ್ಲಾ’ದಲ್ಲಿ ನೆತನ್ಯಾಹು ಹಾಗೂ ಅವರ ಕುಟುಂಬಕ್ಕೆ ಸಾಕಷ್ಟು ಪ್ರಚಾರ ನೀಡಿದ ಆರೋಪ ಬೆಝೆಕ್ ಕಂಪನಿಯ ಮೇಲಿದೆ. ನೆತನ್ಯಾಹು ಅವರ ಪತ್ನಿ ಸಾರಾ ಹಾಗೂ ಮಗ ಯೇರ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಯಿತು.

ನೆತನ್ಯಾಹು ಅವರ ದೀರ್ಘಕಾಲದ ವಕ್ತಾರ ಹಾಗೂ ಆಪ್ತ, ನಿರ್ ಹೆಫೆಟ್ಸ್‌ ಅವರ ಹೇಳಿಕೆ ಆಧರಿಸಿ ವಿಚಾರಣೆ ನಡೆಸಲಾಯಿತು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಸೂಕ್ಷ ರಕ್ಷಣೆಯ ಭರವಸೆ ಸಿಕ್ಕ ಬಳಿಕ ಸಾಕ್ಷ್ಯ ನುಡಿಯಲು ಹೆಫೆಟ್ಸ್ ಒಪ್ಪಿಕೊಂಡಿದ್ದಾರೆ. ಸಂಬಂಧಿಸಿದ ಕಡತಗಳನ್ನು ಪೊಲೀಸರಿಗೆ ನೀಡಲೂ ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry