ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

7
ಸರ್ಕಾರದ ಯೋಜನೆಗಳ ಸದ್ಬಳಕೆ ಅಗತ್ಯ: ಶಾಸಕ ಎಚ್.ವೈ.ಮೇಟಿ ಅಭಿಮತ

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

Published:
Updated:
ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಬಾಗಲಕೋಟೆ: ಮತಕ್ಷೇತ್ರದ ಹೊಸೂರ, ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯ್ತಿ ನೂತನ ಕಟ್ಟಡಗಳ ನಿರ್ಮಾಣದ ಕಾಮಗಾರಿಯ ಭೂಮಿಪೂಜೆ, ಬೊಮ್ಮಣಗಿ ಪುನರ್ವಸತಿ ಕೇಂದ್ರದಲ್ಲಿ ಮುಖ್ಯ ರಸ್ತೆ ಹಾಗೂ ನಾಯನೇಗಲಿ–ಸದಾಶಿವ ಸಕ್ಕರೆ ಕಾರ್ಖಾನೆವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಎಚ್.ವೈ.ಮೇಟಿ ಭಾನುವಾರ ಭೂಮಿಪೂಜೆ ನೆರವೇರಿಸಿದರು.

ನರೇಗಾ ಯೋಜನೆಯಡಿ ₹26 ಲಕ್ಷ ವೆಚ್ಚದಲ್ಲಿ ಹೊಸೂರ, ₹18.22 ಲಕ್ಷ ವೆಚ್ಚದಲ್ಲಿ ಚಿಕ್ಕಮ್ಯಾಗೇರಿಯ ಗ್ರಾಮ ಪಂಚಾಯ್ತಿ ನೂತನ ಕಟ್ಟಡ ನಿರ್ಮಾಣ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಿಭಾಗ ಬಾಗಲಕೋಟೆ 2017-–18ನೇ ಸಾಲಿನ ಸಕ್ಕರೆ ನಿಧಿ ಅಡಿಯಲ್ಲಿ ₹70 ಲಕ್ಷ ವೆಚ್ಚದಲ್ಲಿ ನಾಯನೇಗಲಿ ಗ್ರಾಮದಿಂದ ಸದಾಶಿವ ಸಕ್ಕರೆ ಕಾರ್ಖಾನೆವರೆಗೆ ರಸ್ತೆ ಸುಧಾರಣೆ ಹಾಗೂ ಬೊಮ್ಮಣಗಿ ಪುನರ್ವಸತಿ ಕೇಂದ್ರದಲ್ಲಿ ₹50 ಲಕ್ಷ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಮೇಟಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಎಲ್ಲ ವರ್ಗದವರನ್ನು ಗಣನೆಗೆ ತೆಗೆದುಕೊಂಡು ಅನುದಾನ ನೀಡಲಾಗುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ ಮಾತನಾಡಿ, ‘ಶಾಸಕ ಮೇಟಿ ಅವರ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಕೆರೆ ತುಂಬಿಸುವುದು, ಸಿಸಿ ರಸ್ತೆಗಳ ನಿರ್ಮಾಣ, ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕಲ್ಪಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಹಾಗಾಗಿ ಮತ್ತೊಮ್ಮೆ ಆಶೀರ್ವದಿಸಿ’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಹನಮವ್ವ ಕರಿಹೊಳಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸಿ.ಆರ್. ಪರನಗೌಡರ, ಉಪಾಧ್ಯಕ್ಷ ಸಲೀಂ ಶೇಖ್, ಎಪಿಎಂಸಿ ಅಧ್ಯಕ್ಷ ಶಿವಾನಂದ ಅಬ್ದಲಪುರ, ಪ್ರಭಾವತಿ ಚಲವಾದಿ, ಗುಂಡಪ್ಪ ಮೇಟಿ, ಜಟ್ಟೆಪ್ಪ ಮಾದಾಪುರ, ಬಲರಾಮ ಪವಾರ, ಬಸವರಾಜ ಕೆಂಜೋಡಿ, ಚನ್ನಪ್ಪ ಉಪ್ಪಾರ, ಶ್ರೀಶೈಲ ಉಪ್ಪಾರ, ಪಾಂಡುಗೌಡ ಗೌಡರ, ಯಲ್ಲಪ್ಪ ಮೇಟಿ, ಶ್ಯಾಮರಾವ್ ದೇಶಪಾಂಡೆ, ಭೀಮಣ್ಣ ಮಾದಾಪುರ, ಭೀಮಣ್ಣ ನಡಗಡ್ಡಿ, ಡಾ.ಎಂ.ಆರ್. ಅಂಗಡಿ, ಎಚ್.ಎನ್. ಬಣಗಾರ, ವೆಂಕನಗೌಡ ಹೊಸಗೌಡರ, ಯಲಗುರದಪ್ಪ ಬೆಳಗಲ್ಲ, ತಾಲ್ಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ನಾಯಕ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಬಿ. ಗಿಡದಾನಪ್ಪಗೋಳ, ಕಿರಿಯ ಎಂಜಿನಿಯರ್ ಕೆ.ಎಸ್. ಹಾದಿಮನಿ, ಎಂ.ಎಸ್. ಹಾಲವರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry