ಲೆಹ್ಮಮ್ ಕೋಚ್‌ ಆಗಿ ಮುಂದುವರಿಕೆ

7

ಲೆಹ್ಮಮ್ ಕೋಚ್‌ ಆಗಿ ಮುಂದುವರಿಕೆ

Published:
Updated:
ಲೆಹ್ಮಮ್ ಕೋಚ್‌ ಆಗಿ ಮುಂದುವರಿಕೆ

ಜೊಹಾನ್ಸ್‌ಬರ್ಗ್‌: ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಆಸ್ಟ್ರೇಲಿಯಾ ತಂಡದ ಕೋಚ್ ಡರೆನ್‌ ಲೆಹ್ಮನ್ ಅವರನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಸ್ಟೀವ್ ಸ್ಮಿತ್‌, ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರಾನ್ ಬ್ಯಾಂಕ್ರಾಫ್ಟ್ ಅವರನ್ನು ಆಸ್ಟ್ರೇಲಿಯಾಗೆ ಕಳುಹಿಸಲಾಗಿದೆ.

ತಂಡದ ಕೃತ್ಯಕ್ಕೆ ಮಾಧ್ಯಮಗಳಿಂದ ತೀವ್ರ ಟೀಕೆ ಕೇಳಿಬಂದಿತ್ತು. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಸದರ್ಲೆಂಡ್‌ ಇಲ್ಲಿಗೆ ಬಂದಿದ್ದರು.

ಪ್ರಕರಣದ ತನಿಖೆಗೆ ಬಂದಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಇಂಟೆಗ್ರಿಟಿ ವಿಭಾಗದ ಮುಖ್ಯಸ್ಥ ಇಯಾನ್ ರಾಯ್ ಅವರೊಂದಿಗೆ ಸುದರ್ಲೆಂಡ್ ಮಂಗಳವಾರ ಚರ್ಚೆ ನಡೆಸಿದ ಅವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಪ್ರಕರಣದಲ್ಲಿ ಭಾಗಿಯಾಗದೇ ಇರುವ ಲೆಹ್ಮನ್ ಅವರನ್ನು ಕೋಚ್‌ ಆಗಿ ಮುಂದುವರಿಸಲು ನಿರ್ಧರಿಸಲಾಗಿದೆ. ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿರುವ ಮೂವರು ಆಟಗಾರರನ್ನು ವಾಪಸ್ ಕಳುಹಿಸಲಾಗಿದೆ. ಟಿಮ್ ಪೈನೆ ಅವರಿಗೆ ತಂಡದ ಅಧಿಕೃತವಾಗಿ ತಂಡದ ನಾಯಕತ್ವ ವಹಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಮೂವರನ್ನು ಸದ್ಯ ಆಸ್ಟ್ರೇಲಿಯಾಗೆ ಕಳುಹಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು ವರದಿ ಬಂದ ನಂತರ ಸೂಕ್ತ ಶಿಕ್ಷೆ ನೀಡಲಾಗುವುದು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry