ರಾಜನ್‌ ನಾಯರ್‌ ಅಮಾನತು

7

ರಾಜನ್‌ ನಾಯರ್‌ ಅಮಾನತು

Published:
Updated:

ದುಬೈ: ಮ್ಯಾಚ್‌ ಫಿಕ್ಸ್‌ ಮಾಡಲು ಜಿಂಬಾಬ್ವೆ ಕ್ರಿಕೆಟ್‌ ತಂಡದ ನಾಯಕ ಗ್ರೇಮ್‌ ಕ್ರೀಮರ್‌ಗೆ ಹಣದ ಆಮೀಷ ಒಡ್ಡಿದ್ದ ರಾಜನ್‌ ನಾಯರ್‌ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ 20 ವರ್ಷ ಅಮಾನತು ಮಾಡಿದೆ.

ನಾಯರ್‌, ಹರಾರೆ ಮೆಟ್ರೊ ಪಾಲಿಟನ್‌ ಕ್ರಿಕೆಟ್‌ ಸಂಸ್ಥೆಯ ಖಜಾಂಚಿ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ಹೋದ ವರ್ಷ ನಡೆದಿದ್ದ ಜಿಂಬಾಬ್ವೆ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಟೆಸ್ಟ್‌ ಸರಣಿಯ ಪಂದ್ಯ ವನ್ನು ಫಿಕ್ಸ್‌ ಮಾಡುವಂತೆ ಕ್ರೀಮರ್‌ಗೆ ಹಣದ ಆಮೀಷ ಒಡ್ಡಿದ್ದರು. ಈ ವಿಷಯವನ್ನು ಕ್ರೀಮರ್‌, ಕೋಚ್‌ ಹೀತ್‌ ಸ್ಟ್ರೀಕ್‌ ಗಮನಕ್ಕೆ ತಂದಿದ್ದರು. ಈ ವರ್ಷದ ಜನವರಿ 16 ರಿಂದ ಶಿಕ್ಷೆ ಜಾರಿಯಾಗಿದ್ದು 2038ರ ಜನವರಿ 16ಕ್ಕೆ ಕೊನೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry