ಆಂಧ್ರಪ್ರದೇಶ: ಸಂಚಾರಿ ಪೊಲೀಸರ ಮೇಲೆ ಕಾರು ಚಲಾಯಿಸಿದ ಪಾನಮತ್ತ ವಿದ್ಯಾರ್ಥಿ

7

ಆಂಧ್ರಪ್ರದೇಶ: ಸಂಚಾರಿ ಪೊಲೀಸರ ಮೇಲೆ ಕಾರು ಚಲಾಯಿಸಿದ ಪಾನಮತ್ತ ವಿದ್ಯಾರ್ಥಿ

Published:
Updated:
ಆಂಧ್ರಪ್ರದೇಶ: ಸಂಚಾರಿ ಪೊಲೀಸರ ಮೇಲೆ ಕಾರು ಚಲಾಯಿಸಿದ ಪಾನಮತ್ತ ವಿದ್ಯಾರ್ಥಿ

ಅಮರಾವತಿ: ಪಾನಮತ್ತ ಎಂಜಿನಿಯರಿಂಗ್ ವಿದ್ಯಾರ್ಥಿಯ ಕಾರನ್ನು ತಡೆಯಲು ಹೋದ ಪೊಲೀಸರ ಮೇಲೆ ಕಾರು ಹತ್ತಿಸಿದ ಘಟನೆ ಆಂದ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿಯು ಮದ್ಯಪಾನ ಮಾಡಿದ್ದನು. ಇಬ್ಬರು ಸಂಚಾರಿ ಪೊಲೀಸರು ಆತನ ಕಾರನ್ನು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಕಾರು ಚಲಾಯಿಸಿ ಪರಾರಿಯಾಗಿದ್ದಾನೆ.ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಕಾಕಿನಾಡು ಎಸ್‌ಪಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry