6

ದೆಹಲಿ ಹೈಕೋರ್ಟ್‌ ಆದೇಶಕ್ಕೆ ‘ಸುಪ್ರೀಂ‘ ತಡೆ

Published:
Updated:
ದೆಹಲಿ ಹೈಕೋರ್ಟ್‌ ಆದೇಶಕ್ಕೆ ‘ಸುಪ್ರೀಂ‘ ತಡೆ

ನವದೆಹಲಿ: ಎಐಎಡಿಎಂಕೆ ಬಂಡಾಯ ಶಾಸಕ ಟಿ.ಟಿ.ವಿ ದಿನಕರನ್‌ ಬಣಕ್ಕೆ ‘ಕುಕ್ಕರ್‌’ ಚಿಹ್ನೆ ನೀಡುವ ಸಂಬಂಧ ಚುನಾವಣಾ ಆಯೋಗವು ಪರಿಣಗಣಿಸಬೇಕು ಎಂದು ದೆಹಲಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ ಬುಧವಾರ ತಡೆಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹಾಗೂ ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್‌ ಅವರ ನೇತೃತ್ವದ ಪೀಠವು, ಎಐಎಡಿಎಂಕೆಯ ಎರಡು ಬಣಗಳ ಸಮಸ್ಯೆ ಹಾಗೂ ಎರಡು ಎಲೆಗಳ ಚಿಹ್ನೆ ವಿವಾದವನ್ನು ಏಪ್ರಿಲ್ ಅಂತ್ಯದೊಳಗೆ ಬಗೆಹರಿಸಬೇಕು ಎಂದು ದೆಹಲಿ ಹಂಗಾಮಿ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಅವರಿಗೆ ಸೂಚಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಮತ್ತು ದಿನಕರನ್‌ ನಡುವಿನ ವಿವಾದ ಈಗ ಕೋರ್ಟ್‌ ಮೆಟ್ಟಿಲೇರಿದೆ.

ದಿನಕರನ್‌ ಅವರ ಎಐಎಡಿಎಂಕೆಗೆ(ಅಮ್ಮ ಬಣ) ‘ಪ್ರೆಸರ್‌ ಕುಕ್ಕರ್’ ಚಿಹ್ನೆ ನೀಡಬೇಕು ಎಂದು ಮಾರ್ಚ್‌ 9ರಂದು ದೆಹಲಿ ಹೈಕೋರ್ಟ್‌ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry