ಲಂಬೋದರ ಮಹಾತ್ಮೆ!

7

ಲಂಬೋದರ ಮಹಾತ್ಮೆ!

Published:
Updated:
ಲಂಬೋದರ ಮಹಾತ್ಮೆ!

ಲಂಬೋದರ ಎನ್ನುವುದು ಗಣಪತಿಯ ಇನ್ನೊಂದು ಹೆಸರು. ಹಾಗೆಯೇ, ಈ ಹೆಸರು ಕೆಲವು ಸಂದರ್ಭಗಳಲ್ಲಿ ಹಾಸ್ಯವನ್ನೂ ಸೂಚಿಸುತ್ತದೆ. ಹಾಗಾಗಿಯೇ, ನಿರ್ದೇಶಕ ರಾಜ್ ಸೂರ್ಯ ಮತ್ತು ನಿರ್ಮಾಪಕ ಬಿ. ಸುದರ್ಶನ್ ಒಟ್ಟಾಗಿ ‘ಲಂಡನ್‌ನಲ್ಲಿ ಲಂಬೋದರ’ ಎನ್ನುವ ಸಿನಿಮಾ ಮಾಡಲು ಅಣಿಯಾಗಿದ್ದಾರೆ.

ಈ ಸಿನಿಮಾದ ಮುಹೂರ್ತ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ಚಿತ್ರೀಕರಣ ಕೂಡ ಈ ವಾರದಲ್ಲಿ ಆರಂಭವಾಗಿದೆ. ಇದು ಮನೋರಂಜನೆಯ ಕಥೆ ಹೊಂದಿರುವ ಚಿತ್ರ ಎಂದು ಚಿತ್ರತಂಡ ಹೇಳಿದೆ. ಲಂಡನ್‌ ಮತ್ತು ಲಂಬೋದರನ ನಡುವಿನ ಕಥೆ ಈ ಸಿನಿಮಾದಲ್ಲಿ ಇರಲಿದೆಯಂತೆ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಸುದರ್ಶನ್ ಮತ್ತು ಸೂರ್ಯ ಪುಟ್ಟ ಕಾರ್ಯಕ್ರಮ ಆಯೋಜಿಸಿದ್ದರು. ಸೂರ್ಯ ಅವರು ನಿರ್ದೇಶಿಸುತ್ತಿರುವ ಮೊದಲ ಸಿನಿಮಾ ಇದು. ‘ಇದು ಹಾಸ್ಯ ಪ್ರಧಾನ ಸಿನಿಮಾ. ಹಾಗೆಯೇ, ಭಾವುಕ ಕ್ಷಣಗಳೂ ಇದರಲ್ಲಿ ಇವೆ. ಇದನ್ನು ಕುಟುಂಬದ ಎಲ್ಲರೂ ಸೇರಿ ವೀಕ್ಷಿಸುವ ಚಿತ್ರ ಎನ್ನಬಹುದು. ಚಿತ್ರದಲ್ಲಿ ಹಾಸ್ಯವೇ ಪ್ರಧಾನವಾಗಿ ಇರುವ ಕಾರಣ ಈ ಹೆಸರು ಇಟ್ಟಿದ್ದೇವೆ. ಚಿತ್ರದ ನಾಯಕ ಲಂಬೋದರನಿಗೆ ದಿನಭವಿಷ್ಯದ ಮೇಲೆ ನಂಬಿಕೆ ಇರುತ್ತದೆ. ಅದರಿಂದಾಗಿ ಅವನ ಜೀವನದಲ್ಲಿ ಆಗುವ ಘಟನೆಗಳು ಈ ಚಿತ್ರದ ಕಥೆ’ ಎಂದರು ಸೂರ್ಯ.

ಸಿನಿಮಾದ ನಾಯಕ ನಟ ಸಂತು. ‘ಅವರು ನಮಗೆ ಬೇಕಾದಂತೆ ಅಭಿನಯಿಸಲು ಸಿದ್ಧರಾಗಿದ್ದಾರೆ. ಶ್ರುತಿ ಪ್ರಕಾಶ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಅರ್ಧ ಚಿತ್ರೀಕರಣ ಬೆಂಗಳೂರಿನಲ್ಲಿ, ಇನ್ನರ್ಧ ಚಿತ್ರೀಕರಣ ಲಂಡನ್‌ನಲ್ಲಿ ನಡೆಯಲಿದೆ’ ಎಂದು ಸೂರ್ಯ ತಿಳಿಸಿದರು.

ನಾಯಕ ಸಂತು ಹುಟ್ಟಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ಅವರು ಈ ಮೊದಲು ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು.ಚಿತ್ರದಲ್ಲಿ ಐದು ಹಾಡುಗಳು ಇದ್ದು, ಪ್ರಣವ್ ಅವರು ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಮತ್ತು ಸಾಹಿತಿ ಜಯಂತ ಕಾಯ್ಕಿಣಿ ಹಾಡುಗಳನ್ನು ಬರೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry