ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸಿದ್ದರಾಮಯ್ಯ ಆ್ಯಪ್‌ನಿಂದ ಬಳಕೆದಾರರ ವೈಯಕ್ತಿಕ ಮಾಹಿತಿಗಳು ಖಾಸಗಿ ಕಂಪನಿಗೆ ರವಾನೆ: ಆ್ಯಪ್ ಸ್ಥಗಿತ

Last Updated 29 ಮಾರ್ಚ್ 2018, 19:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ್ಯಪ್‌ನಿಂದ ಬಳಕೆದಾರರ ವೈಯಕ್ತಿಕ ಮಾಹಿತಿಗಳು ಮೈಸೂರಿನ ಖಾಸಗಿ ಕಂಪನಿಗೆ ರವಾನೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನ ಆ್ಯಪ್‌ ನನ್ನ ಖಾಸಗಿ ವಿವರಗಳಾದ ಹೆಸರು, ಮೊಬೈಲ್‌ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಮೈಸೂರಿನ ಇನ್‌ಫೋಪೈನ್‌ ಎಂಬ ಕಂಪನಿಗೆ ರವಾನಿಸಿದೆ ಎಂದು ಟೆಕಿ ಶ್ರೀಹರ್ಷ ಪೆರ್ಲ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಗುರುವಾರವೇ ಸಿದ್ದರಾಮಯ್ಯ ಆ್ಯಪ್‌ ಅನ್ನು ಸ್ಥಗಿತಗೊಳಿಸಲಾಗಿದೆ.

ಸರ್ಕಾರಿ ಆ್ಯಪ್‌ನಲ್ಲಿದ್ದ ಮಾಹಿತಿಯನ್ನು ಖಾಸಗಿ ಕಂಪನಿಗೆ ವರ್ಗಾಯಿಸಿದ್ದು ಏಕೆ ಮತ್ತು ಖಾಸಗಿ ಮಾಹಿತಿ ಸುರಕ್ಷತೆ ಬಗ್ಗೆ ಮುಖ್ಯಮಂತ್ರಿ ಖಾತರಿ ನೀಡುವರೇ ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. ತಮ್ಮ ಆರೋಪಕ್ಕೆ ಪೂರಕವಾಗಿ ಸ್ಕ್ರೀನ್‌ಚಿತ್ರವನ್ನೂ ಪ್ರದರ್ಶಿಸಿದ್ದಾರೆ. ಇನ್‌ಫೋಪೈನ್‌ ಸರ್ಕಾರಕ್ಕಾಗಿ ಆ್ಯಪ್‌ ಅಭಿವೃದ್ಧಿಪಡಿಸಿದ ಕಂಪನಿಯಾಗಿದೆ.

ಸಿದ್ದರಾಮಯ್ಯ ಆ್ಯಪ್‌ ಈವರೆಗೆ ಸುಮಾರು 30 ಸಾವಿರ ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT