ಬಾಕ್ಸಿಂಗ್‌: ಫೈನಲ್‌ಗೆ ಅಂಕುಶಿತಾ ಬೋರೊ ಲಗ್ಗೆ

7

ಬಾಕ್ಸಿಂಗ್‌: ಫೈನಲ್‌ಗೆ ಅಂಕುಶಿತಾ ಬೋರೊ ಲಗ್ಗೆ

Published:
Updated:

ರೋಹ್ಟಕ್‌: ಅಂಕುಶಿತಾ ಬೋರೊ ಇಲ್ಲಿ ನಡೆಯುತ್ತಿರುವ ಯೂತ್ ನ್ಯಾಷನಲ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಫೈನಲ್ ಪ್ರವೇಶಿಸಿದ್ದಾರೆ.

60ಕೆ.ಜಿ ಮಹಿಳೆಯರ ವಿಭಾಗದಲ್ಲಿ ಅಸ್ಸಾಂನ ಯುವ ಆಟಗಾರ್ತಿ ಅಂಕುಶಿತಾ ಸೆಮಿಫೈನಲ್‌ ಬೌಟ್‌ನಲ್ಲಿ ಹರಿಯಾಣದ ಜೋನಿ ಅವರನ್ನು ಮಣಿಸಿದರು. ಪ್ರಬಲ ಹಾಗೂ ನಿಖರ ಪಂಚ್‌ಗಳಿಂದ ಗಮನಸೆಳೆದ ಅವರು ಆರಂಭದಿಂದಲೇ ಎದುರಾಳಿಯನ್ನು ಹಿಮ್ಮೆಟ್ಟಿಸಿದರು. ಇದರಿಂದಾಗಿ 5–0ರಲ್ಲಿ ಮಣಿಸುವಲ್ಲಿ ಯಶಸ್ವಿಯಾದರು.

ಫೈನಲ್‌ನಲ್ಲಿ ಅಂಕುಶಿತಾ ಉತ್ತರಾಖಂಡದ ಹೇಮಾ ಎದುರು ಪೈಪೋಟಿ ನಡೆಸಲಿದ್ದಾರೆ. ಹರಿಯಾಣದ ಸ್ಪರ್ಧಿಗಳಾದ ಸಾಕ್ಷಿ (57ಕೆ.ಜಿ), ನೀತು (48ಕೆ.ಜಿ), ಮನೀಷಾ (64ಕೆ.ಜಿ), ಅನಾಮಿಕಾ (51ಕೆ.ಜಿ) ಅಂತಿಮ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಅನಾಮಿಕಾ ಎದುರು ಸ್ಪರ್ಧಿಸಿದ್ದ ಮಣಿಪುರದ ಎಮ್‌.ಪೂಜಾ ದೇವಿ ಮೊದಲ ಸುತ್ತಿನಲ್ಲಿಯೇ ಪಂದ್ಯದಿಂದ ಹಿಂದೆ ಸರಿದರು. ಪುರುಷರ 69ಕೆ.ಜಿ ವಿಭಾಗದಲ್ಲಿ ಎಸ್‌ಎಸ್‌ಸಿಬಿ ತಂಡದ ವಿಜಯದೀಪ್‌ ಅವರು ದೆಹಲಿಯ ಅಭಿಲಾಷ್ ಎದುರು ಗೆದ್ದರು.

ಫೈನಲ್‌ನಲ್ಲಿ ವಿಜಯದೀಪ್‌ ಮಹಾರಾಷ್ಟ್ರದ ನಿಖಿಲ್ ದುಬೆ ಎದುರು ಆಡಲಿದ್ದಾರೆ. ಸೆಮಿಫೈನಲ್‌ನಲ್ಲಿ ನಿಖಿಲ್ ಪಂಜಾಬ್‌ನ ಪರ್ಲಾದ್ ಸಿಂಗ್ ಎದುರು ಜಯದಾಖಲಿಸಿದ್ದಾರೆ. ಲೈಟ್ ವೆಲ್ಟರ್‌ವೇಟ್ ವಿಭಾಗದಲ್ಲಿ ಎಸ್‌ಎಸ್‌ಸಿಬಿ ತಂಡದ ಆಕಾಶ್‌ ಫೈನಲ್ ಪ್ರವೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry