ಅವಧಿ ಪೂರ್ಣ: ಸಂತಸ ಹಂಚಿಕೊಂಡ ಸಿದ್ದರಾಮಯ್ಯ

7

ಅವಧಿ ಪೂರ್ಣ: ಸಂತಸ ಹಂಚಿಕೊಂಡ ಸಿದ್ದರಾಮಯ್ಯ

Published:
Updated:

ಬೆಂಗಳೂರು: ‘ಕಳೆದ 40 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಯಾರೊಬ್ಬರೂ ಐದು ವರ್ಷ ಪೂರ್ಣಗೊಳಿಸಲಿರಲಿಲ್ಲ. ಇಂತಹ ಸದವಕಾಶ ನನಗೆ ಸಿಕ್ಕಿದ್ದಕ್ಕೆ ಸಂತಸವಾಗುತ್ತಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಈ ಗೌರವ ನೀಡಿದ್ದಕ್ಕಾಗಿ ರಾಜ್ಯದ ಜನರಿಗೆ ಅಭಿನಂದನೆ ಹೇಳುತ್ತೇನೆ. ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ರೂಪಿಸಲು ನಾವೆಲ್ಲ ಒಗ್ಗೂಡಿ ಶ್ರಮಿಸೋಣ’ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ಕನ್ನಡ ಭಾಷೆಗೆ ಆದ್ಯತೆ ನೀಡುವ ನವ ಕರ್ನಾಟಕವನ್ನು ಒಟ್ಟಾಗಿ ನಿರ್ಮಿಸೋಣ. ಕನ್ನಡ ಧ್ವಜ ಎತ್ತರದಲ್ಲಿ ಹಾರಿದರೆ ಅದು ನಮಗೆ ಹೆಮ್ಮೆಯ ಸಂಗತಿ. ಈ ಮೂಲಕ ಭಾರತವೂ ಹೆಮ್ಮೆಪಡುವಂತೆ ಆಗುತ್ತದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಎಲ್ಲ ಮಕ್ಕಳಿಗೂ 10 ವರ್ಷ ಗುಣಮಟ್ಟ ಶಿಕ್ಷಣ, ಯುವ ಜನತೆಗೆ ಕೌಶಲ್ಯ ತರಬೇತಿ, ಕೃಷಿಕರಿಗೆ ನೀರಾವರಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ದುರ್ಬಲ ವರ್ಗದವರಿಗೆ ಲ್ಯಾಪ್‌ಟಾಪ್‌, ಹೊಗೆ ರಹಿತ ಮನೆಗಳು, ಹಳ್ಳಿಗಳಿಗೆ 24 ಗಂಟೆ ವಿದ್ಯುತ್‌ ಸಿಗಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry