ಜನಜಾಗೃತಿಗೆ ಬಿಜೆ‍ಪಿ ಬೈಕ್‌ ರ‍್ಯಾಲಿ

7

ಜನಜಾಗೃತಿಗೆ ಬಿಜೆ‍ಪಿ ಬೈಕ್‌ ರ‍್ಯಾಲಿ

Published:
Updated:
ಜನಜಾಗೃತಿಗೆ ಬಿಜೆ‍ಪಿ ಬೈಕ್‌ ರ‍್ಯಾಲಿ

ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಜನಜಾಗೃತಿ ಮೂಡಿಸಲು ಮಹದೇವಪುರ ಕ್ಷೇತ್ರದ ಜ್ಯೋತಿಪುರ ಬಿಜೆಪಿ ಯುವಮೋರ್ಚಾ ಗುರುವಾರ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ನಮ್ಮ ಸಾಧನೆಗಳು ಹಾಗೂ ಕಾಂಗ್ರೆಸ್‌ ಪಕ್ಷದ ವೈಫಲ್ಯಗಳ ಬಗ್ಗೆ ಮನೆಮನೆಗೆ ತೆರಳಿ ಅರಿವು ಮೂಡಿಸಲು ಈ ರ‍್ಯಾಲಿ ಆಯೋಜಿಸಲಾಗಿದೆ ಎಂದು ಹೇಳಿದರು.

‘ಮಹದೇವಪುರದಲ್ಲಿ ಐಟಿ–ಬಿಟಿ ಸಂಸ್ಥೆಗಳು ಹೆಚ್ಚಾಗಿವೆ. ಈ ಭಾಗದಿಂದಲೇ ಅಧಿಕ ತೆರಿಗೆ ಪಾವತಿಯಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಸಮರ್ಪಕ ಅನುದಾನ ನೀಡುವಲ್ಲಿ ಮಾತ್ರ ತಾರತಮ್ಯ ಮಾಡುತ್ತಿದೆ. ಲಭ್ಯವಿದ್ದ ಅನುದಾನದಲ್ಲಿಯೇ ಮೂಲಸೌಕರ್ಯ ಒದಗಿಸಲು ಶ್ರಮಿಸಿದ್ದೇನೆ’ ಎಂದು ತಿಳಿಸಿದರು.

ಜ್ಯೋತಿಪುರದಿಂದ ಪ್ರಾರಂಭಗೊಂಡ ರ‍್ಯಾಲಿ ಬಿದರಹಳ್ಳಿ, ಹಿರಂಡಹಳ್ಳಿ, ಸೀಗೆಹಳ್ಳಿ, ಹೂಡಿ, ಕಾಡುಗುಡಿ, ವರ್ತೂರು, ಮಾರತ್ತಹಳ್ಳಿಯಲ್ಲಿ ಮುಕ್ತಾಯಗೊಂಡಿತು. 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry