4

ತಕ್ಷಣವೇ ಸಿರಿಯಾದಿಂದ ಅಮೆರಿಕ ಸೇನೆ ವಾಪಸ್‌: ಟ್ರಂಪ್‌

Published:
Updated:
ತಕ್ಷಣವೇ ಸಿರಿಯಾದಿಂದ ಅಮೆರಿಕ ಸೇನೆ ವಾಪಸ್‌: ಟ್ರಂಪ್‌

ವಾಷಿಂಗ್ಟನ್‌: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧಕ್ಕಾಗಿ ಅಮೆರಿಕ ₹7ಲಕ್ಷ ಕೋಟಿ (7 ಟ್ರಿಲಿಯನ್‌ ಡಾಲರ್‌)ಗಳನ್ನು ವ್ಯರ್ಥ ಮಾಡಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸಿರಿಯಾದಿಂದ ಅಮೆರಿಕದ ಸೇನೆ ತಕ್ಷಣವೇ ವಾಪಾಸಾಗಲಿದೆ ಎಂದು ತಿಳಿಸಿದ್ದಾರೆ.

ಐಎಸ್‌ ಉಗ್ರರನ್ನು ಹಿಮ್ಮೆಟ್ಟಿಸಲು ಮತ್ತು ಉಗ್ರರು ವಶಪಡಿಸಿಕೊಂಡಿರುವ ಭೂಪ್ರದೇಶಗಳಿಂದ ಅವರನ್ನು ಹೊರದಬ್ಬಲು ಅಮೆರಿಕ ತನ್ನ ಎಲ್ಲ ಸಂಪತ್ತನ್ನು ಬಳಸಿಕೊಳ್ಳುತ್ತಿದೆ. ಐಎಸ್‌ ಉಗ್ರರು ನರಕದ ಬಾಗಿಲು ಬಡಿಯುವಂತೆ ಮಾಡಿದ್ದೇವೆ. ಇನ್ನು ಸಿರಿಯಾದಿಂದ ಹೊರಬರುತ್ತೇವೆ. ಬೇರೆಯವರು ಆ ಜವಾಬ್ದಾರಿಯನ್ನು ವಹಿಸಿಕೊಳ್ಳಲಿ ಎಂದು ಓಹಿಯೊದ ಮೂಲಸೌಕರ್ಯದ ಬಗ್ಗೆ ಮಾಡನಾಡುತ್ತಾ ಹೀಗೆ ಹೇಳಿದ್ದಾರೆ.

‘ಮಧ್ಯಪ್ರಾಚ್ಯದಲ್ಲಿ ₹7ಲಕ್ಷ ಕೋಟಿ ಹಣ ವ್ಯಯಿಸಿದ್ದೇವೆ. ಅಲ್ಲಿ ಶಾಲೆಯೊಂದನ್ನು ನಿರ್ಮಿಸುತ್ತೇವೆ. ಅವರು ಕೆಡವುತ್ತಾರೆ. ನಾವು ಮತ್ತೆ ನಿರ್ಮಿಸುತ್ತೇವೆ, ಅವರು ಮತ್ತೆ ಕೆಡವುತ್ತಾರೆ. ಮತ್ತೆ ನಿರ್ಮಿಸಿದರೆ ಅವರು ಕೆಡವುತ್ತಾರೆ. ಆದರೆ, ಓಹಿಒದಲ್ಲಿ ನಾವು ಶಾಲೆಯೊಂದನ್ನು ನಿರ್ಮಿಸಲು ಬಯಸಿದರೆ ಹಣ ಸಿಗುವುದಿಲ್ಲ. ಪೆನ್‌ಸಿಲ್ವಾನಿಯಾದಲ್ಲಿ ಅಥವಾ ಅಯೊವಾದಲ್ಲಿ ಶಾಲೆ ನಿರ್ಮಿಸಲು ಫೆಡರಲ್‌ (ಸಾಮಾಜಿಕ ಕಾರ್ಯಗಳಿಗಾಗಿ ಬ್ಯಾಂಕುಗಳು ಮೀಸಲಿಡುವ ಹಣ) ಹಣ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ನಾವು ಅಷ್ಟೊಂದು ಹಣ ವ್ಯಯಿಸಿದ್ದೇವೆ. ಆದರೆ ನಮಗೇನು ಸಿಕ್ಕಿತು? ಏನೂ ಇಲ್ಲ. ತೈಲವನ್ನು ನಾಗರಿಕರಂತೆ ಜೋಪಾನ ಮಾಡಿ ಎಂದು  ಹೇಳಿದ್ದೆ. ನಾವು ಯಾವತ್ತೂ ತೈಲವನ್ನು ಇಟ್ಟುಕೊಂಡಿಲ್ಲ. ಒಂದು ವೇಳೆ ಇಟ್ಟುಕೊಂಡಿದ್ದರೆ ಇವತ್ತು ಐಎಸ್‌ ಇರುತ್ತಿರಲಿಲ್ಲ. ಈಗ ಐಎಸ್‌ ಬಳಿ ಅತಿ ಹೆಚ್ಚು ತೈಲ ಇದೆ. ಅವರ ಚಟುವಟಿಕೆಗಳಿಗೆ ಹಣದ ಕೊರತೆ ಇಲ್ಲ. ನಾವು ತೈಲವನ್ನು ಜೋಪಾನ ಮಾಡದಿರುವುದು ದಡ್ಡತನ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry