ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆ

7

ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆ

Published:
Updated:

 

ಚಿಂತಾಮಣಿ: ನಗರದ ವೆಂಕಟಗಿರಿ ಕೋಟೆಯ ಮುಖಂಡ ವಿ.ಮುನಿರಾಜು ಮತ್ತು ಬೆಂಬಲಿಗರು ಶನಿವಾರಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಪಕ್ಷ ಸೇರಿದರು.ವಿ.ಮುನಿರಾಜು ಮಾತನಾಡಿ, ಸಂಸದ ಕೆ.ಎಚ್‌.ಮುನಿಯಪ್ಪ ಸಾರಥ್ಯದಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠಗೊಳ್ಳುತ್ತಿದೆ. ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಾನು ಮತ್ತು ನನ್ನ ಬೆಂಬಲಿಗರು ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರುತ್ತಿದ್ದೇವೆ ಎಂದು ಹೇಳಿದರು.

ನಮ್ಮ ತಂದೆ ಕಾಲದಿಂದಲೂ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿಯುತ್ತಿದ್ದೆವು. ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಡಾ.ಎಂ.ಸಿ. ಸುಧಾಕರ್‌ ಯಾವುದೇ ಮುನ್ಸೂಚನೆ ನೀಡದೆ ನನ್ನನ್ನು ನಗರಸಭೆಯ ನಾಮನಿರ್ದೇಶಿತ ಸದಸ್ಯ ಸ್ಥಾನದಿಂದ ತೆಗೆದು ಹಾಕಿದ ಕಾರಣ ಮನನೊಂದು ಜೆಡಿಎಸ್‌ ಸೇರಿದ್ದೆ ಎಂದು ತಿಳಿಸಿದರು.

ಮುಖಂಡರಾದ ವಿ.ರವೀಂದ್ರ, ಎಂ.ನಾರಾಯಣಸ್ವಾಮಿ, ಕೆ.ಮುನಯ್ಯ, ಆನಂದ್‌, ನಾರಾಯಣಸ್ವಾಮಿ, ಶಿವಲಿಂಗ, ಸುಮನ್‌, ಮುನಿಕೃಷ್ಣ, ಲೋಕೇಶ್‌, ನರಸಿಂಹಯ್ಯ, ಮೂರ್ತಿ, ದೇವಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry