ದಾಖಲೆ ಇಲ್ಲದ ₹50 ಲಕ್ಷ ಪೊಲೀಸರ ವಶ

7

ದಾಖಲೆ ಇಲ್ಲದ ₹50 ಲಕ್ಷ ಪೊಲೀಸರ ವಶ

Published:
Updated:
ದಾಖಲೆ ಇಲ್ಲದ ₹50 ಲಕ್ಷ ಪೊಲೀಸರ ವಶ

ಬಾಗಲಕೋಟೆ: ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ₹50 ಲಕ್ಷ ನಗದನ್ನು ಶನಿವಾರ ತಾಲ್ಲೂಕಿನ ಹೊನ್ನಾಕಟ್ಟಿ ಕ್ರಾಸ್‌ನ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೆಎ 29, ಎನ್‌ 2053 ಸಂಖ್ಯೆಯ ಹ್ಯೂಂಡೈ ಕಾರ್‌ನಲ್ಲಿ ಹಣ ಸಾಗಿಸಲಾಗುತ್ತಿತ್ತು. ಫ್ಲೈಯಿಂಗ್ ಸ್ಕ್ವಾಡ್‌, ಬಾಗಲಕೋಟೆ ತಹಶಿಲ್ದಾರ್ ಹಾಗೂ ಇಲ್ಲಿನ ಗ್ರಾಮೀಣ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಇಳಕಲ್‌ನಿಂದ ಬಾಗಲಕೋಟೆ ಕಡೆಗೆ ಕಾರು ಸಂಚಿಸುತ್ತಿತ್ತು. ದಾಖಲಾತಿ ಪರಿಶೀಲಿನಿ ಕಾರಿನಲ್ಲಿ ಇದ್ದವರನ್ನು ಅಧಿಕಾರಿಗಳು ಪ್ರಶ್ನಿಸಿದಾಗ, ಹಣ ಇಳಕಲ್ ಡಿಸಿಸಿ ಬ್ಯಾಂಕ್‌ಗೆ ಸೇರಿದ್ದು ಎಂದಿದ್ದಾರೆ.

ಆದರೆ, ಹಣ ಬ್ಯಾಂಕ್‌ಗೆ ಸೇರಿರುವುದು ಎಂಬುದಕ್ಕೆ ಪೂರಕ ದಾಖಲೆಗಳು ಇಲ್ಲ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದರು. ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

₹5 ಲಕ್ಷ ನಗದು ವಶ

ಪ್ರತ್ಯೇಕ ಪ್ರಕರಣದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹೫ ಲಕ್ಷ ನಗದನ್ನು ತಹಶೀಲ್ದಾರ ವಿನಯ ಕುಲಕರ್ಣಿ ನೇತೃತ್ವದ ತಪಾಸಣಾ ತಂಡ ವಶಕ್ಕೆ ಪಡೆದಿದೆ.

ತಾಲ್ಲೂಕಿನ ಮುರನಾಳ ಗ್ರಾಮದ ಗುತ್ತಿಗೆದಾರ ಶಿವಾನಂದ ಕೋವಳ್ಳಿ ಮಹೀಂದ್ರಾ ಟಿಯುವಿ ವಾಹನದಲ್ಲಿ ಹಣವನ್ನು ರಾಂಪುರಕ್ಕೆ ಒಯ್ಯುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry