ಮೊಬೈಲ್ ರಾಜ

7

ಮೊಬೈಲ್ ರಾಜ

Published:
Updated:
ಮೊಬೈಲ್ ರಾಜ

ಕೈಯಲ್ಲೊಂದು ಸ್ಮಾರ್ಟ್ ಫೋನ್

ಕಿವಿಯಲ್ಹಾಕಿ ಹೆಡ್ ಫೋನ್‌

ಸ್ಟೈಲಲಿ ಹಾಕುತ ಸ್ಟೆಪ್

ಬಂದ ಬಂದ ಮೊಬೈಲ್ ರಾಜ

ಹರಕು ಮುರುಕು ಜೀನ್ಸ್ ಪ್ಯಾಂಟ್

ಡಗಳಂಪಗಳ ಹಾಫ್ ಶರ್ಟ್

ಹಾಕಿಕೊಂಡು ಕೂಲಿಂಗ್ ಗ್ಲಾಸ್

ಬಂದ ನಮ್ಮ ಮೊಬೈಲ್ ರಾಜ

ಹಾಕೋದಿಲ್ಲಾ ಕರೆನ್ಸಿ

ಮಾತಾಡ್ತಾನೆ ಟಾಲ್ ಫ್ರೀ 

ಸುಮ್ಮನೇ ಬಿಡ್ತಾ ರೈಲು

ಬಂದ ನಮ್ಮ ಮೊಬೈಲ್ ರಾಜ

ಬಳಸ್ತಾನಂತೆ ಫೇಸ್ಬುಕ್

ಇದ್ದಾರಂತೆ ಥೌಸಂಡ್ ಫ್ರೆಂಡ್ಸ್‌

ಮಾಡ್ತಾ ಜೋರು ಸೌಂಡು

ಬಂದ ನಮ್ಮ ಮೊಬೈಲ್ ರಾಜ

ಇಟ್ಟಿದ್ದೇನೆ ಸಿಕ್ರೆಟ್ ಕೋಡ್

ಗೊತ್ತಾಗೊಲ್ಲ ಯಾರಿಗೂ ಪಿನ್

ಎಲ್ಲೂ ಇಲ್ಲ ಇಂಥ ಮೊಬೈಲ್

ಎನುತ ಬಂದ ಮೊಬೈಲ್ ರಾಜ

ಹೇಳೋದೆಲ್ಲ ಬುರುಡೆ ಸ್ಪೀಚು

ಮೊಬೈಲ್ ಮಾತ್ರ ಡಬ್ಬಾ ಸೆಟ್ಟು

ಆದ್ರೂ ಮಾಡುತ ಡೌಲು

ಬಂದ ನಮ್ಮ ಮೊಬೈಲ್ ರಾಜ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry