ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ: ದೆಹಲಿಯಲ್ಲಿ ಇಬ್ಬರು ಶಿಕ್ಷಕರು, ಕೋಚಿಂಗ್‌ ಸೆಂಟರ್‌ ಮುಖ್ಯಸ್ಥನ ಬಂಧನ

7

ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ: ದೆಹಲಿಯಲ್ಲಿ ಇಬ್ಬರು ಶಿಕ್ಷಕರು, ಕೋಚಿಂಗ್‌ ಸೆಂಟರ್‌ ಮುಖ್ಯಸ್ಥನ ಬಂಧನ

Published:
Updated:
ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ: ದೆಹಲಿಯಲ್ಲಿ ಇಬ್ಬರು ಶಿಕ್ಷಕರು, ಕೋಚಿಂಗ್‌ ಸೆಂಟರ್‌ ಮುಖ್ಯಸ್ಥನ ಬಂಧನ

ದೆಹಲಿ: ಸಿಬಿಎಸ್‌ಇ 12ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ದೆಹಲಿ ಪೊಲೀಸರು ಖಾಸಗಿ ಶಾಲೆಯ ಇಬ್ಬರು ಶಿಕ್ಷಕರು ಹಾಗೂ ಕೋಚಿಂಗ್‌ ಸೆಂಟರ್‌ ಮುಖ್ಯಸ್ಥನನ್ನು ಬಂಧಿಸಿದ್ದಾರೆ.

ಖಾಸಗಿ ಶಾಲೆಯ ಶಿಕ್ಷಕರಾದ ರೋಹಿತ್‌(ಭೌತಶಾಸ್ತ್ರ ಶಿಕ್ಷಕ), ರಿಷಬ್‌(ಗಣಿತ ಶಿಕ್ಷಕ) ಹಾಗೂ ಕೋಚಿಂಗ್‌ ಸೆಂಟರ್‌ ನಡೆಸುತ್ತಿರುವ ತೌಕೀರ್‌ ಬಂಧಿತರು.

ಪ್ರಶ್ನೆಪತ್ರಿಕೆಗಳನ್ನು ಇಡಲಾಗಿದ್ದ ಕೊಠಡಿಗಳಿಗೆ ಈ ಇಬ್ಬರೂ ಶಿಕ್ಷಕರಿಗೂ ಪ್ರವೇಶವಿತ್ತು. ಪರೀಕ್ಷೆ ಪ್ರಾರಂಭಕ್ಕೂ ಮುನ್ನ 9:15ಕ್ಕೆ ಪ್ರಶ್ನೆಪತ್ರಿಕೆಯ ಫೋಟೋ ಕ್ಲಿಕ್ಕಿಸಿರುವ ಶಿಕ್ಷಕರು ಅದನ್ನು ಕೋಚಿಂಗ್‌ ಸೆಂಟರ್‌ ಮುಖ್ಯಸ್ಥನಿಗೆ ರವಾನಿಸಿದ್ದಾರೆ. ಆತ ಪ್ರಶ್ನೆಗಳನ್ನು ಬರಹ ರೂಪಕ್ಕೆ ಇಳಿಸಿ ವಿದ್ಯಾರ್ಥಿಗಳಿಗೆ ಕಳುಹಿಸಿಕೊಟ್ಟಿದ್ದಾನೆ.

ಈ ಸಂಬಂಧ ಶಾಲೆಯ ಇತರ ಶಿಕ್ಷಕರು ಹಾಗೂ ಕೋಚಿಂಗ್‌ ಸೆಂಟರ್‌ ಸಿಬ್ಬಂದಿ ವಿಚಾರಣೆ ಮುಂದುವರಿಸಿರುವುದಾಗಿ ಕ್ರೈಂ ವಿಭಾಗದ ಡಿಸಿಪಿ ಡಾ.ರಾಮ್‌ ಗೋಪಾಲ್‌ ನಾಯಕ್‌ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry