ಮೊಬೈಲ್‌ ತಯಾರಿಕೆ: ವಿಶ್ವದ  2ನೇ ಅತಿದೊಡ್ಡ ದೇಶ ಭಾರತ

ಮಂಗಳವಾರ, ಮಾರ್ಚ್ 26, 2019
33 °C

ಮೊಬೈಲ್‌ ತಯಾರಿಕೆ: ವಿಶ್ವದ  2ನೇ ಅತಿದೊಡ್ಡ ದೇಶ ಭಾರತ

Published:
Updated:
ಮೊಬೈಲ್‌ ತಯಾರಿಕೆ: ವಿಶ್ವದ  2ನೇ ಅತಿದೊಡ್ಡ ದೇಶ ಭಾರತ

ನವದೆಹಲಿ : ಮೊಬೈಲ್‌ ತಯಾರಿಕೆಯಲ್ಲಿ ಭಾರತವು ಈಗ ಚೀನಾ ನಂತರದ ಎರಡನೇ ಸ್ಥಾನಕ್ಕೆ ಏರಿದೆ ಎಂದು ದೇಶಿ ಮೊಬೈಲ್ ಸೇವಾ ಸಂಸ್ಥೆ (ಐಸಿಎ) ತಿಳಿಸಿದೆ.

’ಕೇಂದ್ರ ಸರ್ಕಾರ, ಐಸಿಎ ಅವಿರತ ಪರಿಶ್ರಮ ಮತ್ತು  ವ್ಯವಸ್ಥಿತ ಪ್ರಯತ್ನಗಳಿಂದ ಇದು ಸಾಧ್ಯವಾಗಿದೆ’ ಎಂದು ‘ಐಸಿಎ’ದ ಅಧ್ಯಕ್ಷ ಪಂಕಜ್‌ ಮೊಹಿಂದ್ರೂ ಅವರು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಮತ್ತು ಐ.ಟಿ ಸಚಿವ ರವಿಶಂಕರ್‌ ಪ್ರಸಾದ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಎಚ್‌ಎಸ್‌, ಚೀನಾದ ರಾಷ್ಟ್ರೀಯ ಸಾಂಖ್ಯಿಕ ಮಂಡಳಿ ಮತ್ತು ವಿಯೆಟ್ನಾಂನ ಸಾಂಖ್ಯಿಕ ಕಚೇರಿಯ ದತ್ತಾಂಶ ಆಧರಿಸಿ ‘ಐಸಿಎ’ ಈ ನಿರ್ಧಾರಕ್ಕೆ ಬಂದಿದೆ.

‘ಐಸಿಎ’ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಮೊಬೈಲ್‌ಗಳ ತಯಾರಿಕೆಯು 2014ರಲ್ಲಿ 30 ಲಕ್ಷ ಇತ್ತು.  2017ರಲ್ಲಿ 1.10 ಕೋಟಿಗೆ ತಲುಪಿದೆ.  2017ರಲ್ಲಿಯೇ ಭಾರತವು ಮೊಬೈಲ್‌ ತಯಾರಿಕೆಯಲ್ಲಿ ವಿಯೆಟ್ನಾಂ ಹಿಂದಿಕ್ಕಿದೆ.

ದೇಶದಲ್ಲಿ ತಯಾರಿಕೆ ಹೆಚ್ಚಳಗೊಂಡಿರುವುದರಿಂದ ಮೊಬೈಲ್‌ಗಳ ಆಮದು ಪ್ರಮಾಣವೂ ಕಡಿಮೆಯಾಗಿದೆ. 2019ರ ವೇಳೆಗೆ ದೇಶದಲ್ಲಿ ವರ್ಷಕ್ಕೆ 50 ಕೋಟಿಗಳಷ್ಟು ಮೊಬೈಲ್‌ ತಯಾರಿಸಬೇಕು ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗುರಿ ನಿಗದಿಪಡಿಸಿದೆ. ಇದರ ಒಟ್ಟು ಮೌಲ್ಯ ₹ 2.99 ಲಕ್ಷ ಕೋಟಿಗಳಷ್ಟಾಗಿರಲಿದೆ.

ಮೊಬೈಲ್‌ ತಯಾರಿಕೆಯಲ್ಲಿನ ಗಮನಾರ್ಹ ಬೆಳವಣಿಗೆ ಕಾರಣಕ್ಕೆ 2019ರ ವೇಳೆಗೆ ₹ 52 ಸಾವಿರ ಕೋಟಿಗಳಷ್ಟು ಮೊತ್ತದ ಬಿಡಿಭಾಗಗಳನ್ನು ತಯಾರಿಸಲೂ ಗುರಿ ನಿಗದಿಪಡಿಸಲಾಗಿದೆ. ಇದರಿಂದ 15 ಲಕ್ಷದಷ್ಟು ನೇರ ಮತ್ತು ಪರೋಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

‘ಮುಂದಿನ ವರ್ಷ, ₹ 9.75 ಕೋಟಿ ಮೊತ್ತದ 12 ಕೋಟಿಗಳಷ್ಟು ಮೊಬೈಲ್‌ಗಳನ್ನು ರಫ್ತು ಮಾಡಲು ಗುರಿ ನಿಗದಿಪಡಿಸಲಾಗಿದೆ. ರಫ್ತು ವಹಿವಾಟಿಗೆ ನಾವು ಹೆಚ್ಚು ಗಮನ ನೀಡಿದರೆ ಈ ಗುರಿಯನ್ನು ಸುಲಭವಾಗಿ ಸಾಧಿಸಬಹುದಾಗಿದೆ’ ಎಂದು ಮೊಹಿಂದ್ರೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry