ಶನಿವಾರ, ಡಿಸೆಂಬರ್ 14, 2019
20 °C

ಶಾಪಿಂಗ್‌ ಮಾಲ್‌ ಅಗ್ನಿದುರಂತ: ಹಿರಿಯ ಗವರ್ನರ್‌ ರಾಜೀನಾಮೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಶಾಪಿಂಗ್‌ ಮಾಲ್‌ ಅಗ್ನಿದುರಂತ: ಹಿರಿಯ ಗವರ್ನರ್‌ ರಾಜೀನಾಮೆ

ಮಾಸ್ಕೊ, ರಷ್ಯಾ : ಕೆಮೆರೊವ್‌ನಲ್ಲಿ ಇತ್ತೀಚೆಗೆ 64 ಮಂದಿಯ ಸಾವಿಗೆ ಕಾರಣವಾದ ಶಾಪಿಂಗ್ ಮಾಲ್ ಅಗ್ನಿ ಅವಘಡದ ಬಳಿಕ ಈ ಪ್ರಾಂತ್ಯದ ಹಿರಿಯ ಗವರ್ನರ್‌ ಅಮನ್‌ ತುಲೆಯೆವ್‌ ಅವರು ತಮ್ಮ ಹುದ್ದೆಗೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ.

‘ರಾಜೀನಾಮೆ ಪತ್ರವನ್ನು ರಷ್ಯಾದ ಅಧ್ಯಕ್ಷರಿಗೆ ಸಲ್ಲಿಸಿದ್ದೇನೆ’ ಎಂದು ಜನರನ್ನು ಉದ್ದೇಶಿಸಿ ಮಾತನಾಡಿದ ಮೂರು ನಿಮಿಷದ ವಿಡಿಯೊ ಬಿಡುಗಡೆಗೊಳಿಸಿದ ಅಮನ್‌ ತಿಳಿಸಿದರು.

1997ರಿಂದ ಕೆಮೆರೊವ್‌ ಭಾಗದ ಗವರ್ನರ್‌ ಆಗಿ ಅಮನ್‌ ಅವರು ಕಾರ್ಯನಿರ್ವಹಿಸುತ್ತಿದ್ದರು. ‘ಅತ್ಯಂತ ಹೆಚ್ಚಿನ ಒತ್ತಡದಲ್ಲಿ’ ಈ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಮಾರ್ಚ್‌ 25ರಂದು ಸೈಬೀರಿಯಾದ ಕೆಮೆರೊವ್‌ ನಗರದ ನಾಲ್ಕು ಮಹಡಿಯ ಶಾಪಿಂಗ್‌ ಮಾಲ್‌ವೊಂದರಲ್ಲಿ ಈ ದುರಂತ ಸಂಭವಿಸಿತ್ತು.

ಪ್ರತಿಕ್ರಿಯಿಸಿ (+)