ಚೇತರಿಸಿಕೊಂಡು ಸ್ಪರ್ಧೆ ಒಡ್ಡಲಿದ್ದೇನೆ: ಸಿಂಧು

ಮಂಗಳವಾರ, ಮಾರ್ಚ್ 19, 2019
20 °C
ಏಪ್ರಿಲ್‌ 4ರಿಂದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ಕ್ರೀಡಾಕೂಟ

ಚೇತರಿಸಿಕೊಂಡು ಸ್ಪರ್ಧೆ ಒಡ್ಡಲಿದ್ದೇನೆ: ಸಿಂಧು

Published:
Updated:
ಚೇತರಿಸಿಕೊಂಡು ಸ್ಪರ್ಧೆ ಒಡ್ಡಲಿದ್ದೇನೆ: ಸಿಂಧು

ನವದೆಹಲಿ (ಪಿಟಿಐ): ‘ಕಾಮನ್‌ವೆಲ್ತ್ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಗಳು ಆರಂಭವಾಗುವಷ್ಟರಲ್ಲಿ ಕಾಲು ನೋವು ಕಡಿಮೆಯಾಗಲಿದೆ’ ಎಂದು ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಹೇಳಿದ್ದಾರೆ.

ಮಂಗಳವಾರ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಸಿಂಧು ಅವರು ಬಲ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು.

‘ಅಭ್ಯಾಸದ ವೇಳೆ ಕಾಲು ನೋವು ಹೆಚ್ಚಾಗಿದ್ದರಿಂದ ವೈದ್ಯರು ಸ್ಕ್ಯಾನಿಂಗ್ ಮಾಡಿದ್ದರು. ವರದಿ ಪ್ರಕಾರ ಯಾವುದೇ ಗಂಭೀರ ಗಾಯ ಆಗಿಲ್ಲ. ಒಂದೆರಡು ದಿನಗಳಲ್ಲಿ ಫಿಟ್‌ನೆಸ್ ಮರಳಿ ಪಡೆದುಕೊಳ್ಳಲಿದ್ದೇನೆ’ ಎಂದು ಸಿಂಧು ಹೇಳಿದ್ದಾರೆ.

‘ಮಹತ್ವದ ಕೂಟದಲ್ಲಿ ಆಡಲು ನಾನು ಸಂಪೂರ್ಣವಾಗಿ ಸಿದ್ಧತೆ ನಡೆಸಿದ್ದೆ. ಆ ಬಳಿಕ ಕಾಲು ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಪಂದ್ಯದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಭರವಸೆ ಇದೆ’ ಎಂದು ಸಿಂಧು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry