ಶುಕ್ರವಾರ, ಡಿಸೆಂಬರ್ 6, 2019
25 °C

ಲಂಡನ್‌ಗೆ ಮರಳಿದ ಮಲಾಲಾ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌ಗೆ  ಮರಳಿದ ಮಲಾಲಾ

ಇಸ್ಲಾಮಾಬಾದ್ : ಮಾರ್ಚ್‌ 29ರಂದು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಮಾಲಾಲ ಯೂಸುಫ್‌ಜೈ ಸೋಮವಾರ ಲಂಡನ್‌ಗೆ ಮರಳಿದರು.

ಐದು ವರ್ಷಗಳ ಹಿಂದೆ  ತಾಲಿಬಾನ್ ಉಗ್ರಗಾಮಿಗಳು ಮಾಲಾಲ ತಲೆಗೆ ಗುಂಡು ಹಾರಿಸಿದ್ದರು. ಇದಾದ ನಂತರ ಇದೇ ಮೊದಲ ಬಾರಿಗೆ ಸ್ವದೇಶಕ್ಕೆ ಬಂದಿದ್ದರು. ವೈದ್ಯಕೀಯ ಚಿಕಿತ್ಸೆಗೆ ಲಂಡನ್‌ಗೆ ತೆರಳಿದ್ದ ಅವರು ಅಲ್ಲೇ ಶಿಕ್ಷಣ ಮುಂದುವರೆಸಿದ್ದರು.

ಇಸ್ಲಾಮಾಬಾದ್‌ನಲ್ಲಿ ತಾವು ಓದಿದ ಶಾಲೆ, ಮಿಂಗೋರಾದ ಮಕಾನ್ ಬಾಗ್‌ನಲ್ಲಿರುವ ತಮ್ಮ ಪೂರ್ವಿಕರ ಮನೆಗೆ ಶನಿವಾರ ಭೇಟಿ ನೀಡಿದ್ದರು. ಕುಟುಂಬದ ಸದಸ್ಯರ ಭೇಟಿ ವೇಳೆ ಭಾವುಕರಾಗಿದ್ದರು. ಮಾಲಾಲ ಅವರಿಗೆ ಇಸ್ಲಾಮಾಬಾದ್‌ ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುಗೆ ನೀಡಲಾಯಿತು.

ಮಾಲಾಲ ಭೇಟಿಯನ್ನು ಗುಪ್ತವಾಗಿ ಇಡಲಾಗಿತ್ತು. ಪ್ರಯಾಣದಲ್ಲಿ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ಪ್ರತಿಕ್ರಿಯಿಸಿ (+)