ಶುಕ್ರವಾರ, ಡಿಸೆಂಬರ್ 6, 2019
23 °C

‘ಪಾಂಟಿಂಗ್‌ ತಂತ್ರಗಳು ತಂಡದ ಬಲ’

Published:
Updated:
‘ಪಾಂಟಿಂಗ್‌ ತಂತ್ರಗಳು ತಂಡದ ಬಲ’

ನವದೆಹಲಿ (ಪಿಟಿಐ): ಮುಖ್ಯ ಕೋಚ್‌ ರಿಕಿ ಪಾಂಟಿಂಗ್ ಅವರ ತಂತ್ರಗಳು ತಂಡಕ್ಕೆ ಬಲ ತುಂಬಲಿದ್ದು ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಕನಸು ನನಸಾಗಲು ನೆರವಾಗಲಿವೆ ಎಂದು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ಶ್ರೇಯಸ್ ಅಯ್ಯರ್ ಅಭಿಪ್ರಾಯಪಟ್ಟರು.

ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್‌ ಮತ್ತು ಆ ತಂಡಕ್ಕೆ ಎರಡು ಬಾರಿ ವಿಶ್ವಕಪ್‌ ಗೆಲ್ಲಿಸಿಕೊಟ್ಟ ನಾಯಕ ಪಾಂಟಿಂಗ್‌ ಅವರು ನಾಲ್ಕು ದಿನಗಳಿಂದ ಡೇರ್‌ ಡೆವಿಲ್ಸ್‌ ತಂಡದ ಜೊತೆಗಿದ್ದಾರೆ. ಇದು ಆಟಗಾರರನ್ನು ಪುಳಕಗೊಳಿ ಸಿದ್ದು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಿದ ಪಾಂಟಿಂಗ್‌ ಡೇರ್‌ ಡೆವಿಲ್ಸ್‌ ತಂಡದ ಸಾಧನೆಗೂ ನೆರವಾಗಲಿದ್ದಾರೆ ಎಂಬುದು ಅವರ ವಿಶ್ವಾಸ.

‘ಪಾಂಟಿಂಗ್ ಅವರೊಂದಿಗಿರುವುದು ನಿಜಕ್ಕೂ ರೋಮಾಂಚಕಾರಿ ಅನುಭವ. ಅಂಗಣದಲ್ಲಿ ಆಕ್ರಮಣಕಾರಿಯಾಗಿ ಆಡುವ ಅವರ ತಂತ್ರ ನಮ್ಮ ಗೆಲುವಿಗೆ ಕಾರಣವಾಗಲಿದೆ. ತಂಡದಲ್ಲಿ ಸಾಕಷ್ಟು ಮಂದಿ ಯುವ ಆಟಗಾರರಿದ್ದಾರೆ. ಅವರಿಗೆ ಪಾಂಟಿಂಗ್‌ ಅವರ ಪಾಠ ನೆರವಾಗಲಿದೆ’ ಎಂದು ಅಯ್ಯರ್ ಹೇಳಿದರು.

‌ಬ್ರೆಂಡನ್‌ ಮೆಕ್ಲಂ ಶಕ್ತಿ: ವೆಟೋರಿ

ಬೆಂಗಳೂರು: ಸ್ಫೋಟಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಲಂ ತಂಡಕ್ಕೆ ಶಕ್ತಿ ತುಂಬಲಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಕೋಚ್‌ ಡ್ಯಾನಿಯೆಲ್ ವೆಟೋರಿ ಅಭಿಪ್ರಾಯಪಟ್ಟರು.

ಭಾನುವಾರ ಸಂಜೆ ತಂಡದ ಅಭ್ಯಾಸದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಮೆಕ್ಲಂ ರನ್ ಗಳಿಸಿಕೊಡಲು ಸಮರ್ಥರು, ನಿರ್ಧಾರಗಳನ್ನು ತೆಗೆದುಕೊಳ್ಳಲು ನಾಯಕನಿಗೆ ನೆರವಾಗಲಿದ್ದಾರೆ. ಅವರ ಆಟದ ಶೈಲಿ ಇತರರಿಗೆ ಪ್ರೇರಣೆಯಾಗಲಿದೆ. ಆದ್ದರಿಂದ ತಂಡಕ್ಕೆ ಅವರು ಆಸ್ತಿ’ ಎಂದರು.

ಮಳೆ, ಅಭ್ಯಾಸ ಮುಂದೂಡಿಕೆ: ಧಾರಾಕಾರ ಮಳೆ ಸುರಿದ ಕಾರಣ ಸೋಮವಾರ ಆರ್‌ಸಿಬಿ ತಂಡದ ಆಟಗಾರರಿಗೆ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ.

ಪ್ರತಿಕ್ರಿಯಿಸಿ (+)