ಭಾನುವಾರ, ಡಿಸೆಂಬರ್ 8, 2019
25 °C

ಮೊದಲ ಸ್ಥಾನಕ್ಕೇರಿದ ನಡಾಲ್‌

Published:
Updated:
ಮೊದಲ ಸ್ಥಾನಕ್ಕೇರಿದ ನಡಾಲ್‌

ಪ್ಯಾರಿಸ್‌ (ಎಎಫ್‌ಪಿ): ಸ್ಪೇನ್‌ನ ರಫೆಲ್ ನಡಾಲ್ ಎಟಿಪಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಮಿಯಾಮಿ ಓಪನ್‌ ಟೂರ್ನಿಯಲ್ಲಿ ನಿರಾಸೆ ಕಂಡ ಸ್ವಿಜರ್ಲೆಂಡ್‌ನ ರೋಜರ್‌ ಫೆಡರರ್‌ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಡಾಲ್ ನಿರಾಸೆಗೆ ಒಳಗಾಗಿದ್ದರು. ಇದರ ಬೆನ್ನಲ್ಲೇ ಫೆಬ್ರುವರಿ 18ರ ನಂತರ ರೋಜರ್ ಫೆಡರರ್‌ ಅಗ್ರ ಕ್ರಮಾಂಕದಲ್ಲಿ ಮುಂದುವರಿದಿದ್ದರು. ಆದರೆ ಮಿಯಾಮಿ ಓಪನ್‌ನ ಎರಡನೇ ಸುತ್ತಿನಲ್ಲಿ ರೋಜರ್ ಫೆಡರರ್‌ ಅವರನ್ನು ಅಮೆರಿಕದ ಜಾನ್‌ ಇಸ್ನೆರ್ ಮಣಿಸಿದ್ದರು.

ಈ ಮೂಲಕ ಇಸ್ನೆರ್‌ ಎಂಟು ಪಾಯಿಂಟ್‌ಗಳ ಏರಿಕೆ ಕಂಡು ಒಂಬತ್ತನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರು 2012ರಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರನ್ನು ಮಣಿಸಿ ಗರಿಷ್ಠ ಒಂಬತ್ತನೇ ರ‍್ಯಾಂಕ್‌ ಗಳಿಸಿದ್ದರು. ದಕ್ಷಿಣ ಕೊರಿಯಾದ ಹಿಯಾನ್‌ ಚುಂಗ್‌ ಒಂದು ಸ್ಥಾನದ ಏರಿಕೆ ಕಂಡಿದ್ದು 20ರಿಂದ 19ಕ್ಕೆ ಜಿಗಿದಿದ್ದಾರೆ.

ಪ್ರತಿಕ್ರಿಯಿಸಿ (+)