ವಾಯುಪಡೆ ಹೆಲಿಕಾಪ್ಟರ್ ಪತನ: ನಾಲ್ವರಿಗೆ ಗಾಯ

7

ವಾಯುಪಡೆ ಹೆಲಿಕಾಪ್ಟರ್ ಪತನ: ನಾಲ್ವರಿಗೆ ಗಾಯ

Published:
Updated:
ವಾಯುಪಡೆ ಹೆಲಿಕಾಪ್ಟರ್ ಪತನ: ನಾಲ್ವರಿಗೆ ಗಾಯ

ಕೇದಾರನಾಥ: ಭಾರತೀಯ ವಾಯುಪಡೆಯ ‘ಎಂಐ17’ ಹೆಲಿಕಾಪ್ಟರ್ ಕೇದಾರನಾಥ ದೇಗುಲದ ಬಳಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಪೈಲಟ್, ಸಹ ಪೈಲಟ್ ಹಾಗೂ ಆರು ಮಂದಿ ಪ್ರಯಾಣಿಕರನ್ನು ಒಳಗೊಂಡಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಂದರ್ಭ ಕಬ್ಬಿಣದ ತೊಲೆಗೆ ಡಿಕ್ಕಿಯಾಗಿ ಪತನಗೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ.

‘ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರನ್ನು ರಕ್ಷಿಸಲಾಗಿದ್ದು, ಸುರಕ್ಷಿತವಾಗಿದ್ದಾರೆ. ಘಟನೆಗೆ ಕಾರಣವೇನೆಂಬುದು ತನಿಖೆಯಿಂದ ತಿಳಿದುಬರಲಿದೆ’ ಎಂದು ವಾಯುಪಡೆಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry