ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೂ ಜೀವವಿಮೆ ತಿಳಿವಳಿಕೆ ಅಗತ್ಯ...

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ತ ಮ್ಮ ಬದುಕಿನ ಭದ್ರತೆಗೆ ಬೇಕಾಗಿರುವ ಅಗತ್ಯಗಳ ಕುರಿತು ಮಹಿಳೆಯರಿಗೆ ಪ್ರಭಾವಿಯಾಗಿ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎನ್ನುವುದನ್ನು ಜೀವವಿಮಾ ಸಂಸ್ಥೆಗಳು ನಡೆಸಿದ ಅಧ್ಯಯನಗಳು ತಿಳಿಸುತ್ತವೆ. ಲಭ್ಯವಿರುವ ಜೀವ ವಿಮಾ ಪಾಲಿಸಿಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು, ಅನಿಶ್ಚಿತತೆಗಳಾದ ಸಾವು, ರೋಗಗಳು ಹಾಗೂ ಅಂಗವೈಕಲ್ಯ ಮತ್ತಿತರ ದಿಢೀರ್ ಸಮಸ್ಯೆ ಎದುರಾದ ಸಂದರ್ಭದಲ್ಲಿ ಹಣಕಾಸಿನ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಹೇಗೆ ಎದುರಿಸಬೇಕು ಎನ್ನುವುದನ್ನೂ ಅವರಿಗೆ ಮನವರಿಕೆ ಮಾಡಿಕೊಡುವ ಅಗತ್ಯ ಇದೆ.

ಮಹಿಳೆಯರಿಗೆ ಈಗ ಉದ್ಯೋಗ ಅವಕಾಶಗಳು ಹೇರಳವಾಗಿ ಲಭಿಸುತ್ತಿವೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಇವರಿಗೆ ಅವಕಾಶಗಳು ತೆರೆದುಕೊಳ್ಳುತ್ತಿವೆ. ಇದರಿಂದ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಾಧ್ಯವಾಗಿದೆ. ಜತೆಗೆ ತಮ್ಮ ಆರ್ಥಿಕ ಹೊರೆಯನ್ನು ಇಳಿಸಿಕೊಳ್ಳುವ ಮಹತ್ತರ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ಇದುವರೆಗೂ ಪುರುಷರಿಗೆ ಮೀಸಲಾಗಿದ್ದ ಈ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ತಮ್ಮ ಹೆಗಲಿಗೆ ಏರಿಸಿಕೊಂಡಿದ್ದಾರೆ.

ಮಹಿಳೆಯರು ಜವಾಬ್ದಾರಿಯುತ ಸ್ಥಾನದಲ್ಲಿ ಕೂರುವ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನಶೀಲರಾಗಿದ್ದಾರೆ. ಹೀಗಾಗಿ ಹೆಚ್ಚಿನ ಮಹಿಳೆಯರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ, ಇದರಿಂದಲೇ ಸುರಕ್ಷೆಯನ್ನು ಒದಗಿಸುವ ಹಲವು ಜೀವವಿಮಾ ಕಂಪನಿಗಳಲ್ಲಿ ತಮ್ಮ ಹೂಡಿಕೆಯನ್ನು ಮಾಡುತ್ತಿಲ್ಲ. ಕೆಲವೇ ಕೆಲವು ಮಹಿಳೆಯರು ತಮಗೆ ಎದುರಾಗಬಲ್ಲ ಅನಿರೀಕ್ಷಿತ ಅಪಾಯಗಳ ವಿರುದ್ಧ ತಮ್ಮ ಕುಟುಂಬದ ಸುರಕ್ಷತೆಗೆ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿರುತ್ತಾರೆ. ಅನಿರೀಕ್ಷಿತವಾಗಿ ಎದುರಾಗಬಲ್ಲ ಅಪಾಯಗಳಾದ ಸಂಗಾತಿಯ ಸಾವು, ಸಾಕಷ್ಟು ಉಳಿತಾಯದ ಕೊರತೆ, ಗಂಭೀರ ಸ್ವರೂಪದ ಕಾಯಿಲೆಗಳು ಅಥವಾ ಆರೋಗ್ಯ ಸಂಬಂಧಿ ಇತರ ಸಮಸ್ಯೆಗಳು ಎದುರಾದಾಗ ಅವುಗಳಿಂದ ರಕ್ಷಣೆ ಪಡೆಯುವುದು ಮಹತ್ವದ ಸಂಗತಿಯಾಗಿರುತ್ತದೆ.

ಸುರಕ್ಷಿತ ಭವಿಷ್ಯಕ್ಕೆ ಜೀವ ವಿಮೆ

ಉದ್ಯೋಗಸ್ಥ ಮಹಿಳೆಯರು ಒಂದು ಮೊತ್ತದ ಹಣವನ್ನು ಜೀವವಿಮೆ ಮೇಲೆ ತೊಡಗಿಸುವುದು ಈಗ ಅನಿವಾರ್ಯವಾಗುತ್ತಿದೆ. ಅನಿರೀಕ್ಷಿತ ಆಘಾತಗಳು ಎದುರಾದ ಸಂದರ್ಭಗಳಲ್ಲಿ ಸಾವಿನಿಂದಾಗಿ ಪರಿಹಾರ ಒದಗಿಸುವ ಹಲವು ಜೀವ ವಿಮಾ ಪಾಲಿಸಿಗಳು ಸಹಕಾರಿಯಾಗುತ್ತವೆ. ಇದರಿಂದ ಜೀವನ ಅಭದ್ರತೆಗೆ ಒಳಗಾಗುವುದಿಲ್ಲ. ಕುಟುಂಬ ಅವಲಂಬಿತ ವ್ಯಕ್ತಿಯ ಅಗಲಿಕೆಯಿಂದ ಧೃತಿಗೆಡುವ ಸ್ಥಿತಿ ಬರುವುದಿಲ್ಲ ಕೆಲ ವಿಮಾ ಪಾಲಿಸಿಗಳ ಮೇಲೆ ಮಹಿಳೆಯರು ಹೂಡಿಕೆ ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

ಜೀವವಿಮಾ ಪಾಲಿಸಿಗಳನ್ನು ಪಡೆಯುವುದು

ಕುಟುಂಬದ ನಿತ್ಯ ಬದುಕಿನ ಮೌಲ್ಯವನ್ನು ಮಹಿಳೆ ಹೆಚ್ಚಿಸುತ್ತಾಳೆ ಎನ್ನುವ ಮಹತ್ವದ ಸಂಗತಿ ಬಗ್ಗೆ ಅನೇಕರಿಗೆ ಅರಿವು ಇರುವುದಿಲ್ಲ. ಕುಟುಂಬದ ನಿರ್ವಹಣೆಯನ್ನು ಕೇವಲ ಪುರುಷರು ಮಾತ್ರ ಮಾಡುತ್ತಿಲ್ಲ. ತಮ್ಮ ಪ್ರೀತಿಪಾತ್ರರಿಗಾಗಿ ಗೃಹಿಣಿಯರೂ ಒಂದಿಷ್ಟು ಉಳಿತಾಯ ಮಾಡಿ ಕುಟುಂಬದ ರಕ್ಷಣೆಗೆ ನೆರವಾಗುತ್ತಾರೆ.

ಅನಿರೀಕ್ಷಿತ ಘಟನೆಗಳು ಸಂಭವಿಸಿ ಕುಟುಂಬದ ದುಡಿಯುವ ವ್ಯಕ್ತಿಯ ಸಾವು ಸಂಭವಿಸಿದರೆ, ಕುಟುಂಬದಲ್ಲಿ ಅಸಮತೋಲನ ಸೃಷ್ಟಿಯಾಗುವುದು ಮಾತ್ರವಲ್ಲ, ಅದುವರೆಗೂ ಇದ್ದ ಹಣಕಾಸಿನ ಭದ್ರತೆಯ ಆಸರೆ ಕೂಡ ಇಲ್ಲವಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಉಳಿತಾಯವನ್ನು ಮಾಡಿ ಬಚ್ಚಿಟ್ಟಿಡುತ್ತಾಳೆ. ನಿವೃತ್ತ ಬದುಕಿಗೆ ಅಗತ್ಯವಿರುವ ಯೋಜನೆಯನ್ನು ಕೂಡ ರೂಪಿಸಿಕೊಳ್ಳುತ್ತಾಳೆ. ಇಂತಹ ಸಂದರ್ಭದಲ್ಲಿ ಜೀವವಿಮೆ ಅವಳ ಆರ್ಥಿಕ ಗುರಿಯನ್ನು ಮಾತ್ರವಲ್ಲ, ಅವಳ ಅನುಪಸ್ಥಿತಿಯಲ್ಲೂ ಕುಟುಂಬ ಸದಸ್ಯರ ಸುರಕ್ಷತೆಗೆ ನೆರವಾಗುತ್ತದೆ. ಮಹಿಳೆಯರು ಟರ್ಮ್ ಯೋಜನೆಗಳ ಮೇಲೆ ಹೂಡಿಕೆ ಮಾಡಲು ಬಯಸಿದರೆ ಅಥವಾ ಲೈಫ್ ಟರ್ಮ್ ಪಾಲಿಸಿಗಳ ಮೇಲೆ ಹೂಡುವುದು ಉತ್ತಮ.

ಟರ್ಮ್ ಯೋಜನೆ

ಜೀವ ವಿಮೆಯ ಶುದ್ಧರೂಪವೆಂದು ಇದು ಪರಿಗಣನೆಯಾಗಿದೆ. ಒಂದು ನಿಗದಿತ ಅವಧಿಗೆ ಒಂದಿಷ್ಟು ಮೊತ್ತವನ್ನು ಕಂತು ರೂಪದಲ್ಲಿ ಪಾವತಿಸುವ ಮೂಲಕ ಮಹಿಳೆಯರು ತಮ್ಮ ಜೀವನವನ್ನು ಭದ್ರಪಡಿಸಿಕೊಳ್ಳಬಹುದಾಗಿದೆ. ಪಾಲಿಸಿದಾರರ ಅನಿರೀಕ್ಷಿತ ಸಾವು ಸಂಭವಿಸಿದರೆ ನಾಮಿನಿಗೆ ಪ್ರತಿಯಾಗಿ ಸಂಪೂರ್ಣ ಮೊತ್ತ ಸಿಗುತ್ತದೆ. ಈ ಮೂಲಕ ಪಾಲಿಸಿದಾರರನ್ನು ಅವಲಂಬಿಸಿರುವ ನಾಮಿನಿಗೆ ಜೀವನದ ಅಭದ್ರತೆ ಕಾಡುವುದಿಲ್ಲ. ಮಹಿಳೆಗೆ ಆರ್ಥಿಕ ಸುರಕ್ಷತೆಯ ಸರಿಯಾದ ಅರಿವು ಇರುತ್ತದೆ. ತಮ್ಮ ಪ್ರೀತಿಪಾತ್ರರಿಗಾಗಿ ಸೂಕ್ತ ಟರ್ಮ್ ಯೋಜನೆಗಳನ್ನು ಆದ್ಯತೆಯ ಆಯ್ಕೆಯಾಗಿ ಪರಿಗಣಿಸುತ್ತಾಳೆ. ಇದರ ಮೇಲೆ ಹೂಡಿಕೆ ಮಾಡಿ ಸುರಕ್ಷಿತವಾಗುತ್ತಾಳೆ. ಅಲ್ಲದೇ ಟರ್ಮ್ ಯೋಜನೆಗಳು ಯಾವುದೇ ಸಂದರ್ಭದಲ್ಲಿ ಎದುರಾಗುವ ಅನಿರೀಕ್ಷಿತ ಆಘಾತಗಳಿಂದ ಚೇತರಿಸಿಕೊಳ್ಳುವ ಆರ್ಥಿಕ ಸಹಕಾರದ ಭರವಸೆ ಹೊಂದಿರುತ್ತದೆ.

ಸಂಪೂರ್ಣ ಜೀವಿತಾವಧಿಯ ಮೇಲೆ ಟರ್ಮ್ ವಿಮೆ ಮಾಡಿಸಿಕೊಳ್ಳುವುದು ಅಂದರೆ ನಿಮ್ಮ ಪ್ರೀತಿಪಾತ್ರರಿಗಾಗಿ ಕೊನೆಯಿಲ್ಲದ ಸುರಕ್ಷೆಯ ವ್ಯಾಪ್ತಿ ಕಲ್ಪಿಸುವುದಾಗಿದೆ. ಜೀವನಪರ್ಯಂತ ಟರ್ಮ್ ಪಾಲಿಸಿಗಳು ನಿಯಮಿತವಾಗಿ ಕಂತುಗಳನ್ನು ಪಾವತಿಸುವುದನ್ನು ಬಯಸುತ್ತವೆ.

ಮಹಿಳೆಯರು ತಮ್ಮ ನಿವೃತ್ತಿಯ ನಂತರವೂ ಸುರಕ್ಷೆ ಮುಂದುವರಿಸಲು ಬಯಸಿದರೆ, ತಮ್ಮನ್ನು ಅವಲಂಬಿಸಿರುವವರಿಗೆ ಖಾತರಿಯ ಪಾವತಿ ಹೊಣೆಗಾರಿಕೆಯನ್ನು ನಿಭಾಯಿಸಲು ಇಚ್ಛಿಸಿದರೆ ಜೀವನ ಪರ್ಯಂತ ಟರ್ಮ್ ಪಾಲಿಸಿಗಳನ್ನು ಮಾಡಿಸುವುದು ಸೂಕ್ತ. ಇದರಿಂದ ಹೆಚ್ಚುವರಿಯಾಗಿ ಸಿಗುವ ಲಾಭವೆಂದರೆ, ಪಾಲಿಸಿಯು ಒಂದು ನಿರ್ದಿಷ್ಟ ಕಾಲಾವಧಿಯ ನಂತರವೂ ಅಂತ್ಯಗೊಳ್ಳುವುದಿಲ್ಲ. ಅಥವಾ ಕೆಲ ಪ್ರತಿಕೂಲ ಆರೋಗ್ಯ ಪರಿಸ್ಥಿತಿ ಅಥವಾ ದೊಡ್ಡಮಟ್ಟದ ಅನಾರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ರದ್ದಾಗುವುದಿಲ್ಲ.

ದೀರ್ಘಾವಧಿ ಉಳಿತಾಯ ಭರವಸೆಯ ಯುಎಲ್‍ಟಿಪಿ

ಯೂಲಿಂಕ್ಡ್ ಜೀವ ವಿಮೆ (ಯುಎಲ್‍ಟಿಪಿ) ಪಾಲಿಸಿಗಳು ಭಾರಿ ಪ್ರಮಾಣದ ಮೊತ್ತವನ್ನು ಅಥವಾ ನಿಯಮಿತ ಪ್ರಮಾಣದ ಪ್ರೀಮಿಯಂಗಳನ್ನು ಪಾವತಿಸುವ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಯುಎಲ್‍ಟಿಪಿಗಳು 5 ವರ್ಷ ಕಾಲಾವಧಿಯ ಲಾಕ್ ಇನ್ ವ್ಯವಸ್ಥೆ ಒಳಗೊಂಡಿರುತ್ತದೆ. ಇದು ಭಾರತೀಯ ವಿಮೆ ನಿಯಂತ್ರಣ ಪ್ರಾಧಿಕಾರದ ನಿಯಮದ ಅಡಿ ನಿಯಮಕ್ಕೆ ಒಳಪಟ್ಟಿರುತ್ತದೆ. ಹಣ ಹೂಡಿಕೆ ಮಾಡಿದ ದಿನದಿಂದ ಹೂಡಿಕೆ ಮಾಡಿದ ಮಹಿಳೆಗೆ ಮುಂದಿನ 5 ವರ್ಷಗಳ ವರೆಗೆ ನಿಯಮಿತ ಉಳಿತಾಯದ ಲಾಭ ಸಿಗುತ್ತದೆ. ಇದರ ಜತೆ ಹೆಚ್ಚುವರಿಯಾಗಿ ದೀರ್ಘಾವಧಿ ಬಂಡವಾಳ ಹೂಡಿಕೆ ಮಾಡಿದರೆ ಮಾತ್ರ ಬಂಡವಾಳ ಹೂಡಿಕೆಯ ಹೆಚ್ಚಿನ ಲಾಭ ಸಿಗಲು ಸಾಧ್ಯ ಹಾಗೂ ಸುಧೀರ್ಘ ಅವಧಿಗೆ ಅದು ಮುಂದುವರಿಯುತ್ತದೆ . ಉದಾಹರಣೆಗೆ 10-15 ವರ್ಷ. ಸಮ್ ಅಷೂರ್ಡ್ (ಅಥವಾ ಅನಿರೀಕ್ಷಿತ ಸಾವಿನ ಸಂದರ್ಭದಲ್ಲಿನ ಪ್ರಯೋಜನಗಳು) ಮೊತ್ತವನ್ನು ಮಹಿಳೆ ಹೂಡಿಕೆ ಮಾಡುವುದರಿಂದ ಆಕೆಯ ಅನಿರೀಕ್ಷಿತ ಸಾವು ಸಂಭವಿಸಿದ ಸಂದರ್ಭದಲ್ಲಿ ಆಕೆಯನ್ನು ಅವಲಂಬಿಸಿರುವ ಪ್ರೀತಿಪಾತ್ರರಿಗೆ ಜೀವನ ಭದ್ರತೆ ಸಿಗುತ್ತದೆ. ಅಲ್ಲದೇ ಯುಎಲ್‍ಟಿಪಿ ಪಾಲಿಸಿಗಳು ಅವಧಿ ಪೂರ್ಣಗೊಳಿಸಿ ಕೈ ಸೇರಿದರೆ ಪಾಲಿಸಿದಾರರು ನಿಗದಿಪಡಿಸಿದ್ದ ಆರ್ಥಿಕ ಗುರಿ ತಲುಪಲು ಸಹಕಾರಿಯಾಗುತ್ತದೆ.

ಅಲ್ಲದೇ ಹಲವು ಜೀವವಿಮಾ ಕಂಪನಿಗಳು ಪ್ರೀಮಿಯಂ ಹಂಚಿಕೆ ಹಾಗೂ ಪಾಲಿಸಿ ನಿರ್ವಹಣೆ, ದಂಡ ವಿಧಿಸುವಿಕೆ, ನಿಧಿ ನಿರ್ವಹಣಾ ಶುಲ್ಕ (ಎಫ್‍ಎಂಸಿ) ಕಡಿಮೆ ಮಾಡುವುದೂ ಸೇರಿದಂತೆ ಇತ್ಯಾದಿ ಕಾರ್ಯಕ್ಕೆ ಶುಲ್ಕ ವಿಧಿಸುವುದಿಲ್ಲ. ಇದರರ್ಥ ಇಂದಿನ ಯುಎಲ್‍ಪಿಎಸ್ ಜಂಟಿ ಲಾಭವನ್ನು ಹೊತ್ತು ತಂದಿದ್ದು, ಇತರೆ ಹಣಕಾಸು ಸಾಧನಗಳೊಂದಿಗೆ ಹೋಲಿಸಿ ನೋಡಿದಾಗ ಜೀವವಿಮೆ ಹಾಗೂ ಹೂಡಿಕೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಿಕೊಳ್ಳುವ ಅವಕಾಶ ಒದಗಿಸಿವೆ. ಅತಿ ಹೆಚ್ಚಿನ ಮರುಪಾವತಿಯನ್ನು ಪಡೆಯಲು ಮ್ಯೂಚುವಲ್ ಫಂಡ್‍ಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ. ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್‍ನಲ್ಲಿ ಘೋಷಿಸಿದ ಮಾರ್ಗದರ್ಶಿ ಸೂತ್ರದ ಪ್ರಕಾರ, ತೆರಿಗೆ ವಿನಾಯಿತಿ ಕೂಡ ಸಿಗಲಿದೆ. ಇದರರ್ಥ ಷೇರು (ಈಕ್ವಿಟಿ) ಆಧಾರಿತ ಮ್ಯೂಚುವಲ್ ಫಂಡ್‍ಗಳು ತೆರಿಗೆ ವಿನಾಯಿತಿ ಹೊಂದಿರುತ್ತವೆ. ಇದೇ ಮೊತ್ತದ ಯುಎಲ್‍ಐಪಿ ಗಳಿಕೆ ಕೂಡ ತೆರಿಗೆ ವಿನಾಯಿತಿ ಸೌಲಭ್ಯ ಹೊಂದಿರುತ್ತದೆ. ಇಇಇ (ವಿನಾಯಿತಿ-ವಿನಾಯಿತಿ-ವಿನಾಯಿತಿ) ಸೌಕರ್ಯವನ್ನು ಯುಎಲ್‍ಐಪಿ ಹೊಂದಿರುತ್ತದೆ. ಇದರರ್ಥ ಗ್ರಾಹಕರು ತೆರಿಗೆ ವಿನಾಯಿತಿಯ ಲಾಭವನ್ನು ಎಲ್ಲಾ ಮೂರು ಹಂತಗಳಲ್ಲಿ ಅಂದರೆ ಹೂಡಿಕೆ, ಗಳಿಕೆ ಹಾಗೂ ಮರಳಿ ಪಡೆಯುವ ಸಂದರ್ಭ ಪಡೆಯುತ್ತಾರೆ.

ವೈದ್ಯಕೀಯ ವೆಚ್ಚ ಭರಿಸಲು

ಸಂಶೋಧನೆ ಹಾಗೂ ತಂತ್ರಜ್ಞಾನ ಕ್ರಾಂತಿ ಇಂದು ದೊಡ್ಡ ಮಟ್ಟದಲ್ಲಿ ಆಗಿದ್ದು, ಮನೆ ಬಾಗಿಲಿಗೆ ವೈದ್ಯಕೀಯ ಸೌಲಭ್ಯಗಳನ್ನು ತಂದು ತಲುಪಿಸುತ್ತಿದೆ. ಆದರೆ ಇದು ವೈದ್ಯಕೀಯ ವೆಚ್ಚದ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ. ಚಿಕಿತ್ಸೆಯ ವೆಚ್ಚ ಹೆಚ್ಚಾಗುತ್ತಲೇ ಇದೆ. ಇದರರ್ಥ ಅನಿರೀಕ್ಷಿತವಾಗಿ ಎದುರಾಗುವ ಅನಾರೋಗ್ಯ ಅಥವಾ ರೋಗಗಳು ಹಠಾತ್ತಾಗಿ ದೊಡ್ಡ ಮೊತ್ತದ ನಗದು ಹೊರೆ ಹೊರಿಸುತ್ತವೆ. ಇದು ಉದ್ಯೋಗ ನೀಡಿದ ಸಂಸ್ಥೆಗೆ ಅತಿ ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ. ವೈದ್ಯಕೀಯ ಬಿಲ್‍ಗಳನ್ನು ಹೆಚ್ಚಿಸುವುದು ಕಳವಳಕಾರಿ ಸಂಗತಿ, ಇದಕ್ಕಾಗಿಯೇ ಹೆಚ್ಚಿನ ಕುಟುಂಬಗಳು ಆರೋಗ್ಯ ವಿಮೆ ಯೋಜನೆ ಪಡೆಯುವ ಮೂಲಕ ಅನಿರೀಕ್ಷಿತವಾಗಿ ಎದುರಾಗುವ ವೆಚ್ಚ ನಿಭಾಯಿಸಲು ಬಯಸುತ್ತವೆ.

ಸಮಗ್ರ ಆರೋಗ್ಯ ವಿಮೆ

ವೈದ್ಯಕೀಯ ಹಣದುಬ್ಬರ ಅಂದರೆ ರೋಗನಿರ್ಣಯದ ಸೇವೆಯ ವೆಚ್ಚವು ಚಿಕಿತ್ಸೆಯ ಆಯ್ಕೆಯೊಂದಿಗೆ ಇದೀಗ ಹೆಚ್ಚು ದುಬಾರಿಯಾಗಿದೆ. ಅನಿರೀಕ್ಷಿತವಾಗಿ ಎದುರಾಗುವ ಅನಾರೋಗ್ಯ ಕುಟುಂಬದ ಆರ್ಥಿಕ ಸ್ಥಿತಿಯನ್ನು ಏರುಪೇರು ಮಾಡುತ್ತದೆ. ಜೀವನಶೈಲಿ ಕಾಯಿಲೆಗೆ ಒಳಗಾಗುವ ಅನೇಕ ಮಂದಿಗೆ ಅದರಲ್ಲೂ ಮಹಿಳೆಯರು ಕೆಲ ರೋಗಗಳಿಂದ ಉಂಟಾಗುವ ಅಪಾಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ದಾರಿ ಹುಡುಕಿಕೊಳ್ಳುವುದು ಅತ್ಯವಶ್ಯಕ. ಒಂದು ಸೂಕ್ತ ವಿಧವಾದ ಆರೋಗ್ಯ ವಿಮೆ ಯೋಜನೆಯು ಅಗತ್ಯವಿರುವ ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ವಿವಿಧ ತುರ್ತು ಸಂದರ್ಭಗಳಲ್ಲಿ ಅಂದರೆ ಆಸ್ಪತ್ರೆಗೆ ದಾಖಲಾದಾಗ, ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಇಲ್ಲವೇ, ಕುಟುಂಬದ ವೈದ್ಯಕೀಯ ಇತಿಹಾಸದಿಂದಾಗಿ ಎದುರಾಗುವ ಹಲವು ಸಮಸ್ಯೆಗಳ ಸಂದರ್ಭದಲ್ಲಿ ಇದು ಸಹಕಾರಿ.

ಅನಾರೋಗ್ಯದ ಸುರಕ್ಷೆ

ಬಹುತೇಕ ಮಹಿಳೆಯರು ತಮಗಿಂತ ತಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಾರೆ. ಆದರೆ, ಕೆಲವೇ ಕೆಲವು ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಜತೆಗೆ ಕುಟುಂಬದ ಕಾಳಜಿ ಮೆರೆಯುತ್ತಾರೆ. ಉಳಿದವರು ಕುಟುಂಬ ಕಾಳಜಿಯನ್ನು ತಮ್ಮ ಆರೋಗ್ಯ ಮರೆತು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇದರೊಂದಿಗೆ ಅವರ ಜೀವನ ಕ್ರಮದ ಸ್ವರೂಪ ಅಥವಾ ಅವರ ಹೆತ್ತವರ ವೈದ್ಯಕೀಯ ಹಿನ್ನೆಲೆ ಕೆಲ ಮಹಿಳೆಯರನ್ನು ಹೆಚ್ಚು ದುರ್ಬಲರನ್ನಾಗಿ ಮಾಡುತ್ತದೆ. ಅವರಿಗೆ ಅಸ್ವಸ್ಥತೆ ಹೆಚ್ಚು ಕಾಡುತ್ತದೆ. ಇಂತವರು ತಮಗಾಗಿ ನಿರ್ಣಾಯಕ ರೋಗಗಳನ್ನು ಕೂಡ ಕವರ್ ಮಾಡುವ ವಿಮೆ ಪಡೆಯಬೇಕಾಗುತ್ತದೆ. ಇದು ನಿರಂತರವಾಗಿ ಚಿಕಿತ್ಸೆ ಪಡೆಯುತ್ತಾ ಸಾಗಲು ಹಾಗೂ ಅಗತ್ಯ ಆರ್ಥಿಕ ಭದ್ರತೆಯನ್ನು ಒದಗಿಸಲು ಬದ್ಧವಾಗಿರುತ್ತದೆ.

ಕೆಲವು ಕಾಯಿಲೆಗಳ ಸಂಪೂರ್ಣ ವ್ಯಾಪ್ತಿಯನ್ನೂ ಹೊಂದಿದ ವಿಮೆ ಪಡೆಯುವುದರಿಂದ ಇರುವ ದೊಡ್ಡ ಅನುಕೂಲವೆಂದರೆ ವಿಮಾ ಸೇವೆ ಪೂರೈಕೆ ಕಂಪನಿಯು ಪಾಲಿಸಿದಾರರ ಆರೋಗ್ಯ ವೆಚ್ಚದ ಪೂರ್ಣ ಪ್ರಮಾಣದ ಮೊತ್ತ ಭರಿಸುವ ಹೊಣೆ ಹೊತ್ತಿರುತ್ತದೆ. ಪಾಲಿಸಿ ದಾಖಲೆಗಳ ಪ್ರಕಾರ ಎಲ್ಲಾ ವಿಧದ ರೋಗಗಳಿಗೂ ಚಿಕಿತ್ಸೆ ಒದಗಿಸುವ ಹೊಣೆ ಹೊತ್ತಿರುತ್ತವೆ. ವಿಮಾ ಪಾಲಿಸಿ ಪಡೆಯುವ ಸಂದರ್ಭ, ನಿರ್ಧಿಷ್ಟ ರೋಗಗಳು ಹಾಗೂ ಅದರ ಸ್ವಭಾವವನ್ನು ತಿಳಿಸಿರಬೇಕಾಗುತ್ತದೆ.

**

ಪ್ರತಿಜ್ಞೆ ಕೈಗೊಳ್ಳಿ

ಮಹಿಳೆಯರು ತಮ್ಮನ್ನು ತಾವು ಪ್ರೀತಿಸಿಕೊಳ್ಳುವುದರ ಜತೆಗೆ ರಕ್ಷಿಸಿಕೊಳ್ಳುವುದಕ್ಕೂ ಗಮನ ಹರಿಸಬೇಕಿದೆ. ಇಂತಹ ಹಲವು ವಿಮಾ ಪಾಲಿಸಿಗಳು ಕೇವಲ ಮಹಿಳೆಯರ ಬಗ್ಗೆ ಕಾಳಜಿ ತೋರಿಸುವುದು ಮಾತ್ರವಲ್ಲ, ಅವರು ಪ್ರೀತಿಸುವವರನ್ನೂ ಕೂಡ ಅನಿರೀಕ್ಷಿತ ಘಟನೆ ಅಥವಾ ಸನ್ನಿವೇಶ ಸಂಭವಿಸಿದಾಗ ರಕ್ಷಿಸಲು ಧಾವಿಸುತ್ತದೆ.

ವಿವಿಧ ಜೀವವಿಮೆ ಪಾಲಿಸಿಗಳ ಕುರಿತು ಅಧ್ಯಯನ ಮಾಡಿ, ನಿಮ್ಮ ಅಗತ್ಯ ಹಾಗೂ ಹೂಡಿಕೆಗೆ ತಕ್ಕನಾದ ಆಯ್ಕೆಯನ್ನು ಮಾಡಿಕೊಳ್ಳಿ. ಇಂದಿನ ಜೀವವಿಮೆ ಯೋಜನೆಗಳು ಹೂಡಿಕೆ ಹಾಗೂ ರಕ್ಷಣೆ ಎರಡರ ಪಾತ್ರವನ್ನೂ ಸಮರ್ಥವಾಗಿ ನಿಭಾಯಿಸುತ್ತಿವೆ. ಹೀಗಿರುವಾಗ ಇವುಗಳನ್ನು ಏಕೆ ಸದ್ಬಳಕೆ ಮಾಡಿಕೊಳ್ಳಬಾರದು. ಈ ಮೂಲಕ ಜೀವನ ಭದ್ರತೆಯನ್ನು ನಿಮಗೂ, ನಿಮ್ಮ ಕುಟುಂಬಕ್ಕೂ ಒದಗಿಸಬಹುದಾಗಿದೆ.

(ಪಾಲಿಸಿಬಜಾರ್‌ಡಾಟ್‌ಕಾಮ್‌ನ ಹಿರಿಯ ನಿರ್ದೇಶಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT