ರಸ್ತೆ ನಾಮಕರಣ ವಿವಾದ: ಪಾಲಿಕೆಗೆ ಮನವಿ

7

ರಸ್ತೆ ನಾಮಕರಣ ವಿವಾದ: ಪಾಲಿಕೆಗೆ ಮನವಿ

Published:
Updated:

ಮಂಗಳೂರು: ಮಂಗಳೂರಿನ ಕೆಥೋ ಲಿಕ್ ಕ್ಲಬ್ ನಿಂದ ಲೈಟ್ ಹೌಸ್ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗಿನ ರಸ್ತೆ ವಿವಾದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಂಗದ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಸೇಂಟ್‌ ಅಲೋಶಿಯಸ್‌ ಕಾಲೇಜು, ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದೆ.

ವಿಜಯಾ ಬ್ಯಾಂಕ್ ನೌಕರರ ಸಂಘ ಟನೆ ರಿಟ್ ಸಲ್ಲಿಸಿತ್ತು. ಕೋರ್ಟ್‌ ಈ ಮನವಿಯನ್ನು ವಿಚಾರಣೆಗೆ ಸ್ವೀಕರಿಸಿ ಯಥಾ ಸ್ಥಿತಿಯನ್ನು ಮುಂದುವರೆಸಿ ಕೊಂಡು ಹೋಗುವಂತೆ ಆದೇಶಿಸಿದೆ. ಆದರೆ ಈ ಆದೇಶದಲ್ಲಿ ನ್ಯಾಯಾಲಯ ನೀಡಿದ ದಿನಾಂಕವನ್ನು ನೌಕರರ ಸಂಘಟನೆ ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು ತಮಗೆ ದೊರೆತ ಜಯ ಎಂದು ಪತ್ರಿಕೆಗಳಲ್ಲಿ ಹೇಳಿಕೆ ನೀಡಿದೆ. ಸೇಂಟ್‌ ಅಲೋಶಿಯಸ್ ಕಾಲೇಜು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ಈ ವಿವಾದದಲ್ಲಿ ಮಧ್ಯ ಪ್ರವೇಶಿ ಸಲು ಅನುಮತಿ ನೀಡಬೇಕೆಂದು ಕೋರಿದೆ. ಅಂತಿಮ ತೀರ್ಪು ಬರುವವರೆಗೆ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಪಾಲಿಕೆಗೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ ಎಂದು ಪ್ರಕಟಣೆ ವಿವರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry