ಶನಿವಾರ, ಆಗಸ್ಟ್ 8, 2020
23 °C

ವಾಯುಪಡೆ ಹೆಲಿಕಾಪ್ಟರ್‌ ‍ಪತನ: ಪ್ರಾಣಾಪಾಯದಿಂದ ಆರುಮಂದಿ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಯುಪಡೆ ಹೆಲಿಕಾಪ್ಟರ್‌ ‍ಪತನ: ಪ್ರಾಣಾಪಾಯದಿಂದ ಆರುಮಂದಿ ಪಾರು

ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ಎಂಐ– 17 ಹೆಲಿಕಾಪ್ಟರ್‌ ಮಂಗಳವಾರ ಕೇದಾರನಾಥದ ಹೆಲಿಪ್ಯಾಡ್‌ನಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿದೆ.

‘ಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಹಾಗೂ ಮೂವರು ಕಾರ್ಮಿಕರಿದ್ದರು. ಬೆಳಿಗ್ಗೆ 8.20ರ ವೇಳೆಗೆ ಹೆಲಿಪ್ಯಾಡ್‌ನಲ್ಲಿ ಕೆಳಗಿಳಿಯುವ ಮುನ್ನ 20 ಮೀಟರ್‌ ದೂರದಲ್ಲೇ ಕೇಬಲ್‌ಗೆ ತಾಗಿ, ಕೆಳಗೆ ಬಿದ್ದಿದೆ’ ಎಂದು ರುದ್ರಪ್ರಯಾಗ್‌ ಜಿಲ್ಲಾಧಿಕಾರಿ ಮಂಗೇಶ್‌ ಗಿಲ್‌ದಿಯಾಲ್‌ ತಿಳಿಸಿದರು.

‘ಕಾಪ್ಟರ್‌ನಲ್ಲಿದ್ದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಒಬ್ಬರ ಕಾಲಿಗೆ ಸಣ್ಣಪ್ರಮಾಣದ ಗಾಯವಾಗಿದೆ. ಕೇದಾರನಾಥದಲ್ಲಿ ನಡೆಯುತ್ತಿರುವ ಕಾಮಗಾರಿಗಾಗಿ ದೊಡ್ಡ ಯಂತ್ರವನ್ನು ಗುಪ್ತಕಾಶಿಯಿಂದ ಸಾಗಿಸುತ್ತಿದ್ದರು’ ಎಂದರು.

ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.