ಗುರುವಾರ ನಾಲ್ಕು ವಿಭಾಗದ ಫೈನಲ್‌

7

ಗುರುವಾರ ನಾಲ್ಕು ವಿಭಾಗದ ಫೈನಲ್‌

Published:
Updated:

ಗೋಲ್ಡ್‌ ಕೋಸ್ಟ್‌: ಕ್ರೀಡಾಕೂಟದ ಸ್ಪರ್ಧೆಗಳು ಗುರುವಾರ ಆರಂಭವಾಗ ಲಿದ್ದು ಮೊದಲ ದಿನ ಒಟ್ಟು 13 ವಿಭಾಗ ಗಳಲ್ಲಿ ಕ್ರೀಡಾಪಟುಗಳು ಸೆಣಸಲಿದ್ದಾರೆ. ಈ ಪೈಕಿ ನಾಲ್ಕು ವಿಭಾಗಗಳಲ್ಲಿ ಫೈನಲ್‌ ನಡೆಯಲಿವೆ.

ಕೂಮೆರಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಬೆಳಗ್ಗಿನ ಜಾವ 4.38ಕ್ಕೆ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ ಪುರುಷರ ತಂಡ ವಿಭಾಗದ ಅರ್ಹತಾ ಸುತ್ತಿನ ಸ್ಪರ್ಧೆಗಳು ಮತ್ತು ಫೈನಲ್‌ ನಡೆಯಲಿದೆ. ಮುಂಜಾನೆ 6.10ಕ್ಕೆ ಈಜು ಸ್ಪರ್ಧೆಗಳು ಆರಂಭವಾಗಲಿವೆ. ಸಂಜೆ 3.15ರಿಂದ ಫೈನಲ್‌ ಸ್ಪರ್ಧೆಗಳು ಇರುತ್ತವೆ.

ಸೌತ್‌ ಪೋರ್ಟ್‌ನಲ್ಲಿ ಬೆಳಗ್ಗಿನ ಜಾವ ಐದು ಗಂಟೆಗೆ ಟ್ರಯಥ್ಲಾನ್ ಮಹಿಳಾ ವಿಭಾಗದ ಫೈನಲ್‌ ಮತ್ತು 8.30ಕ್ಕೆ ಪುರುಷ ವಿಭಾಗದ ಫೈನಲ್ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry