ಮಂಗಳವಾರ, ಡಿಸೆಂಬರ್ 10, 2019
25 °C

ಮೋದಿ ವಿರೋಧಿ ಅಲೆ ಎಬ್ಬಿಸಲು ರಾಷ್ಟ್ರದ್ರೋಹಿಗಳೆಲ್ಲ ಕೈಜೋಡಿಸುತ್ತಿದ್ದಾರೆ: ಅನಂತಕುಮಾರ ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ವಿರೋಧಿ ಅಲೆ ಎಬ್ಬಿಸಲು ರಾಷ್ಟ್ರದ್ರೋಹಿಗಳೆಲ್ಲ ಕೈಜೋಡಿಸುತ್ತಿದ್ದಾರೆ: ಅನಂತಕುಮಾರ ಹೆಗಡೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಎಬ್ಬಿಸಲು ರಾಷ್ಟ್ರದ್ರೋಹಿಗಳೆಲ್ಲ ಕೈಜೋಡಿಸುತ್ತಿದ್ದಾರೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.

ಸರಣಿ ಟ್ವೀಟ್‌ಗಳ ಮೂಲಕ ಪ್ರತಿಪಕ್ಷಗಳು, ಪ್ರಗತಿಪರರು ಮತ್ತು ಬುದ್ಧಿಜೀವಿಗಳ ವಿರುದ್ಧ ಅವರು ಹರಿಹಾಯ್ದಿದ್ದಾರೆ.

‘ಇಡೀ ವಿಶ್ವ ಈಗ ಮೋದಿಯವರ ನಾಯಕತ್ವವನ್ನು ಮತ್ತು ಭಾರತದ ಮಹತ್ವವನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದೆ.  ಆದರೆ ಭಾರತದಲ್ಲಿ ಏನಾಗುತ್ತಿದೆ? ಇಡೀ ದೇಶದಲ್ಲಿ ಮೋದಿ ವಿರೋಧಿ ಅಲೆ ಎಬ್ಬಿಸಲು ರಾಷ್ಟ್ರದ್ರೋಹಿಗಳೆಲ್ಲ ಕೈಜೋಡಿಸುತ್ತಿದ್ದಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಮೋದಿಯವರನ್ನು ವಿರೋಧಿಸುವ ಗುಂಪು ಹಿಂದೂ ವಿರೋಧಕ್ಕೆ, ರಾಷ್ಟ್ರ ದ್ರೋಹಕ್ಕೆ ಮತ್ತು ಅಧಿಕಾರದ ಅಮಲಿಗೆ ಏನೂ ಮಾಡಲು ಸಿದ್ಧವಿರುವ ಸಮೂಹವಾಗಿದೆ. ಜಗತ್ತು ಭಾರತವನ್ನು ಒಪ್ಪಿಕೊಳ್ಳುತ್ತಿರುವ ಈ ಸಮಯದಲ್ಲಿ ದೇಶದಲ್ಲಿ ವಿದ್ರೋಹದ ದನಿಗಳು ತಾರಕಕ್ಕೇರಿವೆ. ಈಗ ಜಾಗೃತ ರಾಷ್ಟ್ರವಾದವೊಂದೇ ನಮ್ಮನ್ನು ಕಾಪಾಡಬಲ್ಲದು; ಅದೊಂದೇ ಭಾರತವನ್ನು ಗೆಲ್ಲಿಸುತ್ತದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ವಿದೇಶಿ ಹಸ್ತಕರ ನೆರವಿನಿಂದ ಎಲ್ಲ ರಾಜ್ಯಗಳಲ್ಲೂ ಸಮಾಜವನ್ನು ಒಡೆಯುವ ವ್ಯವಸ್ಥಿತ ಯೋಜನೆಯನ್ನು ಜಾರಿಮಾಡಲು ಕಾಂಗ್ರೆಸ್ ಶ್ರಮಿಸುತ್ತಿದೆ. ಆ ಪಕ್ಷದ ಆನುವಂಶಿಕ ವಾರಸುದಾರರು ವಂಚನೆಯ ಪ್ರಕರಣದಲ್ಲಿ ಜಾಮೀನು ಪಡೆದು ಜನರಿಗೆ ತಿಳುವಳಿಕೆ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ!!’ ಎಂದು ಕಾಂಗ್ರೆಸ್ ವಿರುದ್ಧವೂ ಟೀಕೆ ಮಾಡಿದ್ದಾರೆ.

‘ಎಲ್ಲ ಕಳ್ಳರೂ ಒಗ್ಗಟ್ಟಾಗುತ್ತಿದ್ದಾರೆ’: ‘ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ಕಳ್ಳ ವ್ಯವಹಾರಗಳಿಗೆ, ಕಪ್ಪು ಹಣ ಚಲಾವಣೆಗೆ ಧಕ್ಕೆ ಬಂದುದರಿಂದ ಎಲ್ಲ ಕಳ್ಳರೂ ಒಟ್ಟಾಗಿ ಮೋದಿ ವಿರೋಧಕ್ಕೆ ಸಂಘಟಿತರಾಗುತ್ತಿದ್ದಾರೆ. ಒಂದು ಕಾಲದಲ್ಲಿ ಪರಸ್ಪರ ಮುಖ ನೋಡಿಕೊಳ್ಳದಿದ್ದವರು ಇಂದು ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು ಆಪ್ತರಾಗಿ ಬಿಟ್ಟಿದ್ದಾರೆ!’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಲೇವಡಿ ಮಾಡಿದ್ದಾರೆ.

ಅನಂತಕುಮಾರ ಹೆಗಡೆ ಟ್ವೀಟ್‌ಗಳು:

ಪ್ರತಿಕ್ರಿಯಿಸಿ (+)