ಬುಧವಾರ, ಡಿಸೆಂಬರ್ 11, 2019
26 °C

ಬಸವಣ್ಣನಿಗೆ ಕೈಮುಗಿವ ಪ್ರಧಾನಿ; ನುಡಿದಂತೆ ನಡೆಯಲೇ ಇಲ್ಲ: ರಾಹುಲ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಣ್ಣನಿಗೆ ಕೈಮುಗಿವ ಪ್ರಧಾನಿ; ನುಡಿದಂತೆ ನಡೆಯಲೇ ಇಲ್ಲ: ರಾಹುಲ್‌ ಟೀಕೆ

ಹೊಳಲ್ಕೆರೆ: ಬಸವಣ್ಣನ ಮುಂದೆ ಕೈಮುಗಿದು ನಿಲ್ಲುವ ಪ್ರಧಾನಿ ನರೇಂದ್ರ ಮೋದಿ, 'ನುಡಿದಂತೆ ನಡೆ' ಎಂಬ ಅವರ ತತ್ವವನ್ನು ಮಾತ್ರ ಪಾಲಿಸಲೇ ಇಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಇಲ್ಲಿನ ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು. 

ಚುನಾವಣೆ ಸತ್ಯ ಹಾಗೂ ಅಸತ್ಯದ ನಡುವೆ ನಡೆಯಲಿದೆ. ನಾವು ನುಡಿದಂತೆ ನಡೆದಿದ್ದೇವೆ. ಅವರು ಬರೀ ಸುಳ್ಳು ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು.

ಭಾಷಣದಲ್ಲಿ ಪದೇ ಪದೇ 'ನುಡಿದಂತೆ ನಡೆ' ತತ್ವವನ್ನು ಉಲ್ಲೇಖಿಸಿ ಬಸವಣ್ಣನಿಗೆ ಅಪಮಾನ ಮಾಡಬೇಡಿ. ಹೇಳಿದ್ದನ್ನು ಮಾಡಿ ತೋರಿಸಿ ಎಂದು ಸವಾಲು ಹಾಕಿದರು.

ಬಿಜೆಪಿಯವರು ದಲಿತರ ಮನೆಗೆ ಹೋಗಿ, ಹೋಟೆಲ್ ಊಟ ತರಿಸಿಕೊಂಡು ತಿಂದು ನಾಟಕವಾಡ್ತಾರೆ. ನಾವು ಇಂದಿರಾ ಕ್ಯಾಂಟೀನ್ ಮೂಲಕ ಕಡಿಮೆ ಬೆಲೆಯಲ್ಲಿ ಜನರಿಗೆ ಆಹಾರ ಒದಗಿಸುತ್ತಿದ್ದೇವೆ ಎಂದು ಬಿಜೆಪಿ ನಡೆಯನ್ನು ಟೀಕಿಸಿದರು.

* ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಷ್ಟ್ರ ರಾಜಕಾರಣದಲ್ಲೂ ಬದಲಾವಣೆ. ಕುಮಾರಸ್ವಾಮಿ ಸುಮ್ಮನೆ ಕಿಂಗ್ ಮೇಕರ್ ಆಗುವ ಕನಸನ್ನು ಕಾಣುತ್ತಿದ್ದಾರೆ.

–ಸಿದ್ದರಾಮಯ್ಯ, ಮುಖ್ಯಮಂತ್ರಿ

ಇನ್ನಷ್ಟು: ದಾವಣಗೆರೆ ಬೆಣ್ಣೆ ದೋಸೆ ಸವಿದು ಚಿತ್ರದುರ್ಗಕ್ಕೆ ತೆರಳಿದ ರಾಹುಲ್ ಗಾಂಧಿ

ಪ್ರತಿಕ್ರಿಯಿಸಿ (+)