ಬಿಎಫ್‌ಸಿಗೆ ಐಜ್ವಾಲ್ ಸವಾಲು

7

ಬಿಎಫ್‌ಸಿಗೆ ಐಜ್ವಾಲ್ ಸವಾಲು

Published:
Updated:

ಗುವಾಹಟಿ (ಪಿಟಿಐ): ಇಂಡಿಯನ್‌ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ಅಮೋಘ ಆಟ ಆಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಎಎಫ್‌ಸಿ ಕಪ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಐಜ್ವಾಲ್ ಫುಟ್‌ಬಾಲ್‌ ಕ್ಲಬ್‌ ತಂಡದ ವಿರುದ್ಧ ಸೆಣಸಲಿದೆ.

ಇಲ್ಲಿನ ಇಂದಿರಾಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ‘ಇ’ ಗುಂಪಿನ ಈ ಪಂದ್ಯ ನಡೆಯಲಿದ್ದು ತಂಡದ ಆಟಗಾರರ ದೈಹಿಕ ಸಾಮರ್ಥ್ಯವನ್ನು ಈ ಪಂದ್ಯ ಸಾಬೀತುಪಡಿಸಲಿದೆ ಎಂದು ಕೋಚ್ ಆಲ್ಬರ್ಟ್‌ ರೋಕಾ ಅವರು ಹೇಳಿದ್ದಾರೆ.

ಈಸ್ಟ್ ಬೆಂಗಾಲ್‌–ಮುಂಬೈ ಸಿಟಿ ಸೆಣಸು: ಭುವನೇಶ್ವರದಲ್ಲಿ ಸೂಪರ್ ಕಪ್ ಫುಟ್‌ಬಾಲ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈಸ್ಟ್ ಬೆಂಗಾಲ್‌ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಸೆಣಸಲಿವೆ.

ಮಹಮ್ಮದ್‌ ರಫೀಕ್‌ ತಂಡಕ್ಕೆ ಮರಳಿರುವುದು ಈಸ್ಟ್ ಬೆಂಗಾಲ್‌ಗೆ ಬಲ ತುಂಬಿದ್ದು ಗೆಲ್ಲುವ ವಿಶ್ವಾಸ ಮೂಡಿಸಿದೆ.

‘ಉತ್ತಮ ಆಟಗಾರರನ್ನು ಹೊಂದಿರುವ ಈಸ್ಟ್ ಬೆಂಗಾಲ್‌ ತಂಡ ಬಲಿಷ್ಠವಾಗಿದೆ. ನಾಕೌಟ್‌ ಹಂತದ ಈ ಪಂದ್ಯದಲ್ಲಿ ತಂಡ ಉತ್ತಮ ತಂತ್ರಗಳನ್ನು ಬಳಸಿ ಗೆಲ್ಲುವ ಪ್ರಯತ್ನ ಮಾಡಲಿದೆ’ ಎಂದು ಕೋಚ್‌ ಖಾಲಿದ್‌ ಜಮೀಲ್‌ ಹೇಳಿದರು.

‘ಇಂಡಿಯನ್‌ ಆ್ಯರೋಸ್‌ ವಿರುದ್ಧ ಸೋತ ನಂತರ ತಂಡದ ಆಟಗಾರರು ನಿರಾಸೆಗೊಂಡಿದ್ದರು. ಆ ಬೇಸರ ಮರೆತು ಇದೀಗ ಮತ್ತೊಂದು ಸವಾಲಿಗೆ ಸಜ್ಜಾಗಿದ್ದೇವೆ. ಈ ಪಂದ್ಯದಲ್ಲಿ ಗೆಲ್ಲಲು ಕಠಿಣ ಅಭ್ಯಾಸ ನಡೆಸಲಾಗಿದೆ’ ಎಂದು ಮುಂಬೈ ಎಫ್‌ಸಿ ತಂಡದ ಕೊಚ್‌ ಅಲೆಕ್ಸಾಂಡರ್‌ ಗುಮರೆಜ್‌ ಅವರು ಹೇಳಿದರು.

ಖಾಬ್ರಾ ಜೊತೆ ಒಪ್ಪಂದ ಮುಂದುವರಿಕೆ: ಹರ್ಮನ್‌ಜೋತ್‌ ಖಾಬ್ರಾ ಜೊತೆಗಿನ ಒಪ್ಪಂದವನ್ನು ಮುಂದು ವರಿಸಲು ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ನಿರ್ಧರಿಸಿದೆ. ಐಎಸ್‌ಎಲ್‌ನಲ್ಲಿ ತಂಡದ ರಕ್ಷಣಾ ವಿಭಾಗಕ್ಕೆ ಖಾಬ್ರಾ ಬಲ ತುಂಬಿದ್ದರು. 2009ರಿಂದ ಆರು ವರ್ಷ ಈಸ್ಟ್ ಬೆಂಗಾಲ್‌ ತಂಡದಲ್ಲಿ ಆಡಿದ್ದ ಖಾಬ್ರಾ ನಂತರ ಚೆನ್ನೈಯಿನ್‌ ಎಫ್‌ಸಿ ತಂಡ ಸೇರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry