ಶನಿವಾರ, ಡಿಸೆಂಬರ್ 14, 2019
20 °C

ಬರಲಿದೆ ‘ಅರಂ–2’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಲಿದೆ ‘ಅರಂ–2’

ಬಹುಭಾಷಾ ನಟಿ ನಯನತಾರ ಅವರು ತಮಿಳಿನ ’ಅರಂ-2’ ಚಿತ್ರದಲ್ಲಿ ರಾಜಕಾರಣಿ ಪಾತ್ರದಲ್ಲಿ ನಟಿಸಲಿದ್ದಾರೆ. ಕಳೆದ ವರ್ಷ ಅವರು ನಟಿಸಿದ್ದ ’ಅರಂ’ ಜನಮೆಚ್ಚುಗೆ ಗಳಿಸಿತ್ತು. ಸಾಮಾಜಿಕ ಸಮಸ್ಯೆ ಕುರಿತಾದ ಈ ಚಿತ್ರದಲ್ಲಿ ಅವರು ದಕ್ಷ ಜಿಲ್ಲಾಧಿಕಾರಿಯಾಗಿ ನಟಿಸಿ ಗಮನ ಸೆಳೆದಿದ್ದರು.

‘ಅರಂ–2’ ಸಿನಿಮಾದ ಚಿತ್ರೀಕರಣ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ. ‘ಅರಂ’ ಚಿತ್ರವನ್ನು ನಿರ್ದೇಶಿಸಿದ್ದ ಗೋಪಿ ನಾಯ್ನಾರ್‌ ಅವರೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ.

ಕಳೆದ ನವೆಂಬರ್‌ನಲ್ಲಿ ತೆರೆ ಕಂಡಿದ್ದ ‘ಆರಂ’ಗೆ ಆರಂಭದ ದಿನಗಳಲ್ಲಿ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಸ್ವತಃ ನಟಿ ನಯನತಾರ ಚಿತ್ರಮಂದಿರಗಳಿಗೆ ಭೇಟಿ ನೀಡಿ ಅಭಿಮಾನಿಗಳನ್ನು ಭೇಟಿಯಾಗುವ ತಂತ್ರದ ಮೂಲಕ ಚಿತ್ರಕ್ಕೆ ಪ್ರೇಕ್ಷಕರನ್ನು ಸೆಳೆದಿದ್ದರು. ಕ್ರಮೇಣ ಪ್ರೇಕ್ಷಕರ ಮನಸಿನಲ್ಲಿ ಸ್ಥಾನ ಪಡೆದ ಚಿತ್ರ ಕಳೆದ ವರ್ಷದ ಹಿಟ್ ಚಿತ್ರಗಳಲ್ಲಿ ಒಂದಾಯಿತು.

ಜಿಲ್ಲಾಧಿಕಾರಿ ಬದುಕಿನಲ್ಲಿ ಒಂದು ದಿನದಲ್ಲಿ ನಡೆಯುವ ಘಟನಾವಳಿಗಳನ್ನು ‘ಆರಂ’ ಕಟ್ಟಿಕೊಡುತ್ತದೆ. 4 ವರ್ಷದ ಮಗುವಿನ ಕಣ್ಣಿನ ಮೂಲಕ ವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತದೆ. ನಯನತಾರಗೆ ಈ ಚಿತ್ರ ಹೊಸ ಇಮೇಜ್ ತಂದುಕೊಟ್ಟಿತ್ತು.

‘ಅರಂ’ನ ಮುಂದುವರೆದ ಭಾಗವಾಗಿ ಬರಲಿರುವ ಹೊಸ ಸಿನಿಮಾ ಇನ್ನಷ್ಟು ‘ಪವರ್‌ಫುಲ್‌’ ಆಗಿರುತ್ತದೆ. ನಯನತಾರಾ ಅವರಿಗೆ ಸೆಪ್ಟೆಂಬರ್‌ ವೇಳೆಗೆ ಬಿಡುವು ದೊರೆಯಲಿದ್ದು, ಆ ಬಳಿಕವಷ್ಟೇ ಚಿತ್ರೀಕರಣ ನಡೆಯಲಿದೆ. ಮೊದಲ ಚಿತ್ರಕ್ಕಿಂತ ಹೆಚ್ಚಾಗಿ ಇದು ಜನರನ್ನು ಸೆಳೆಯುವ ಸಾಧ್ಯತೆ ಇದೆ’ ಎಂದು ನಿರ್ಮಾಪಕ ರಾಜೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)