ಶುಕ್ರವಾರ, ಆಗಸ್ಟ್ 14, 2020
21 °C
ಕಂಗನಾ ರನೋಟ್‌ ಐಟಂ ಸಾಂಗ್‌

ಐಟಂ ಸಾಂಗ್‌ ಕಂಗನಾ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಟಂ ಸಾಂಗ್‌ ಕಂಗನಾ ಗರಂ

ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳು ಅತ್ಯಂತ ಸೆಕ್ಸಿಯಾಗಿರುತ್ತವೆ. ಅವುಗಳನ್ನು ನಿಷೇಧಿಸಬೇಕು ಎಂದು ಬಾಲಿವುಡ್ ‘ಕ್ವೀನ್‌’ ಕಂಗನಾ ರನೋಟ್‌ ಗರಂ ಆಗಿ ಹೇಳಿದ್ದಾರೆ.

‘ನನಗೆ ಖುಷಿಕೊಡುವ ಸಂಗತಿಗಳೆಲ್ಲವೂ ಎಲ್ಲರಿಗೂ ಖುಷಿ ಕೊಡಬೇಕೆಂದೇನಿಲ್ಲ. ನಾನು ಸೌಂದರ್ಯವರ್ಧಕಗಳನ್ನು ಉತ್ತೇಜಿಸುವುದಿಲ್ಲ, ದೊಡ್ಡ ದೊಡ್ಡ ಹೀರೊಗಳ ಜತೆ ನಟಿಸುವುದಿಲ್ಲ, ಐಟಂ ಸಾಂಗ್‌ಗಳಿಗೆ ನೃತ್ಯ ಮಾಡುವುದಿಲ್ಲ. ಒಟ್ಟಿನಲ್ಲಿ ನಿಮ್ಮ ಜೇಬು ತುಂಬಿಸಿಕೊಳ್ಳುವ ಉದ್ದೇಶದಿಂದ ನೀವು ಹೇಳಿದ್ದನ್ನೆಲ್ಲಾ ಮಾಡಲಾರೆ’ ಎಂದು ಖಡಕ್‌ ಆಗಿ ಹೇಳಿದ್ದಾರೆ ‘ಮಣಿಕರ್ಣಿಕಾ’ದ ‘ಝಾನ್ಸಿ ರಾಣಿ’.

ಐಟಂ ಸಾಂಗ್‌ಗಳು ಸೆಕ್ಸಿ ನೃತ್ಯದಿಂದ ಕೂಡಿರುತ್ತವೆ. ಸಿನಿಮಾಕ್ಕೂ ಅದಕ್ಕೂ ಸಂಬಂಧವೇ ಇರದಿದ್ದರೂ ವಿನಾ ಕಾರಣ ತುರುಕಲಾಗುತ್ತದೆ. ನಮ್ಮ ಸಮಾಜಕ್ಕೆ, ನಮಗೆ ಮತ್ತು ನಮ್ಮ ಮಕ್ಕಳಿಗೆ ಕೆಡುಕು ಉಂಟುಮಾಡುವ ಕೆಲಸವನ್ನು ಯಾಕೆ ಮಾಡಬೇಕು? ನಾಳೆ ನನಗೇ ಒಬ್ಬ ಮಗಳಾದರೆ ಅಥವಾ ನಿಮಗೆ ಹೆಣ್ಣು ಮಕ್ಕಳಿದ್ದರೆ ಅವರನ್ನು ಅಂತಹ ನೃತ್ಯದ ಪಾತ್ರದ ಹೆಸರಿನಲ್ಲಿ ಕರೆಯುವುದನ್ನು ನಾವು ಒಪ್ಪುತ್ತೇವೆಯೇ?’ ಎಂದು, ಮಾಧ್ಯಮ ಸಂದರ್ಶನವೊಂದರಲ್ಲಿ ಕಂಗನಾ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ತಮಗನಿಸಿದ್ದನ್ನು ಸಾರಾಸಗಟಾಗಿ ಹೇಳಿ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಎಲ್ಲೆಡೆ ಸುದ್ದಿ ಮತ್ತು ವಿವಾದದ ಕೇಂದ್ರವಾಗಿದ್ದ ಕಂಗನಾ ಈ ಹಿಂದೆ ಸೌಂದರ್ಯವರ್ಧಕಗಳ ವಿರುದ್ಧ ಹೇಳಿಕೆ ನೀಡಿದಾಗ ಭಾರಿ ಬೆಂಬಲವೂ ವ್ಯಕ್ತವಾಗಿತ್ತು. ಆದರೆ ಐಟಂ ಸಾಂಗ್‌ಗಳ ಕುರಿತ ಈಗಿನ ಅವರ ನಿಲುವಿಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ, ಚಿತ್ರರಂಗ ಹಾಗೂ ನಿರ್ದೇಶಕರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದುನೋಡಬೇಕಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.