7
ಭಾರತ ಫುಟ್‌ಬಾಲ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಕುಶಾಲ್‌ ಹೇಳಿಕೆ

ವಿಲೀನ ಕುರಿತು ವರದಿ ನೀಡಲಿರುವ ಎಎಫ್‌ಸಿ

Published:
Updated:

ನವದೆಹಲಿ : ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಮತ್ತು ಐ ಲೀಗ್ ಟೂರ್ನಿಗಳ ಕುರಿತು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ (ಎಎಫ್‌ಸಿ) ಪರಿಶೀಲನೆ ನಡೆಸಿ ಸಮಗ್ರ ವರದಿ ನೀಡಲಿದೆ. ಅದರ ಆಧಾರದಲ್ಲಿ ವಿಲೀನದ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌)

ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಲೀನ ಪ್ರಕ್ರಿಯೆಯ ಕುರಿತು ಪರಿಶೀಲನೆ ನಡೆಸಲು ಇಬ್ಬರು ಸದಸ್ಯರ ಸಮಿತಿಯನ್ನು ಫಿಫಾ ರಚಿಸಿದೆ. ಲೀಗ್‌ನಲ್ಲಿ ಆಡುವ ಕೆಲವು ಕ್ಲಬ್‌ಗಳ ಮೇಲೆ ನಿಷೇಧ ಹಾಕಲು ಎಎಫ್‌ಸಿ ಮುಂದಾಗಿತ್ತು. ಆ ಕುರಿತು ಕೂಡ ತನಿಖೆ ನಡೆಯಲಿದೆ’ ಎಂದರು.

‘ವರದಿ ನಮ್ಮ ಕೈಸೇರಿದ ಮೇಲೆ ಎಐಎಫ್‌ಎಫ್‌ ಸಭೆ ಸೇರಲಿದೆ. ಸರ್ವ ಸದಸ್ಯರ ಸಲಹೆ ಪಡೆದು ನಿರ್ಣಯ ಕೈಗೊಳ್ಳಲಾಗುವುದು’ ಎಂದು ದಾಸ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry