ಭಾನುವಾರ, ಡಿಸೆಂಬರ್ 15, 2019
23 °C
ಎಎಫ್‌ಸಿ ಕಪ್‌: ಡ್ಯಾನಿಯೆಲ್‌ ಸೆಗೋವಿಯಾ, ರಾಹುಲ್‌ ಭೆಕೆ, ಡ್ಯಾನಿಯೆಲ್‌ ಲಾಲ್ಹಿಂಪುಯಾ ಗೋಲು

ಬಿಎಫ್‌ಸಿ ಶುಭಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಬಿಎಫ್‌ಸಿ ಶುಭಾರಂಭ

ಗುವಾಹಟಿ : ಡ್ಯಾನಿಯೆಲ್‌ ಸೆಗೋವಿಯಾ, ರಾಹುಲ್‌ ಭೆಕೆ ಮತ್ತು ಡ್ಯಾನಿಯೆಲ್‌ ಲಾಲ್ಹಿಂಪುಯಾ ಗಳಿಸಿದ ಗೋಲುಗಳ ಬಲದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಎಎಫ್‌ಸಿ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ಬಿಎಫ್‌ಸಿ ತಂಡದವರು ಐಜ್ವಾಲ್‌ ಎಫ್‌ಸಿ ತಂಡವನ್ನು 3–1 ಅಂತರದಿಂದ ಮಣಿಸಿದರು.

ಆರಂಭದಲ್ಲಿ ಎದುರಾಳಿ ತಂಡ ಬಿಎಫ್‌ಸಿಗೆ ಪೆಟ್ಟು ನೀಡಿತು. ಆದರೆ ಸುಧಾರಿಸಿಕೊಂಡ ತಂಡ ನಂತರ ತಿರುಗೇಟು ನೀಡಿತು. ಈ ಮೂಲಕ ಆರು ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಂಡಿತು.

ಈ ಋತುವಿನಲ್ಲಿ ಅಮೋಘ ಸಾಧನೆ ಮಾಡಿದ ಸುನಿಲ್ ಚೆಟ್ರಿ, ಗುರುಪ್ರೀತ್‌ ಸಿಂಗ್ ಮತ್ತು ಉದಾಂತ ಸಿಂಗ್ ಅವರಿಗೆ ವಿಶ್ರಾಂತಿ ನೀಡಿದ ತಂಡ ಯುವ ಆಟಗಾರರನ್ನು ಕಣಕ್ಕೆ ಇಳಿಸಿತ್ತು. ಲಾಲ್‌ತ್ವಾಮಾವಿಯಾ ರಾಲ್ಟೆ ನಾಯಕತ್ವ ವಹಿಸಿದ್ದರು.

ಡ್ಯಾನಿಯೆಲ್‌ ಸೆಗೋವಿಯಾ 45ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ರಾಹುಲ್‌ ಭೆಕೆ ಮತ್ತು ಡ್ಯಾನಿಯೆಲ್‌ ಲಾಲ್ಹಿಂಪುಯಾ ಕ್ರಮವಾಗಿ 63 ಮತ್ತು 77ನೇ ನಿಮಿಷದಲ್ಲಿ ಮುನ್ನಡೆ ಗಳಿಸಿಕೊಟ್ಟರು.

ಪ್ರತಿಕ್ರಿಯಿಸಿ (+)