4
ಭ್ರಷ್ಟಾಚಾರ ಪ್ರಕರಣ

ದಕ್ಷಿಣ ಕೊರಿಯಾ ಮಾಜಿ ಪ್ರಧಾನಿ ಪಾರ್ಕ್‌ ಗುನ್‌ಗೆ 24 ವರ್ಷ ಜೈಲು ಶಿಕ್ಷೆ

Published:
Updated:
ದಕ್ಷಿಣ ಕೊರಿಯಾ ಮಾಜಿ ಪ್ರಧಾನಿ ಪಾರ್ಕ್‌ ಗುನ್‌ಗೆ 24 ವರ್ಷ ಜೈಲು ಶಿಕ್ಷೆ

ಸೋಲ್‌ : ಭ್ರಷ್ಟಾಚಾರ ಪ್ರಕರಣದಲ್ಲಿ ದಕ್ಷಿಣ ಕೊರಿಯಾ ಮಾಜಿ ಪ್ರಧಾನಿ ಪಾರ್ಕ್‌ ಗುನ್ ಹೈ (66) ಅವರಿಗೆ 24 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಪಾರ್ಕ್‌ ಬೆಂಬಲಿಗರು ಸೋಲ್ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಿದರು.

ಹತ್ತು ತಿಂಗಳಿನಿಂದ ವಿಚಾರಣೆ ನಡೆಯುತ್ತಿದ್ದು, ಹಲವು ಅಪರಾಧ ಪ್ರಕರಣ, ಲಂಚ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸಾಬೀತಾದ ಕಾರಣ ಶಿಕ್ಷೆ ಪ್ರಕಟವಾಗಿದೆ.

‘ಪಾರ್ಕ್‌ ಅವರು ತಮ್ಮ ದೀರ್ಘಕಾಲದ ಗೆಳೆಯ ಚೊಯಿ ಸೂನ್–ಸಿಲ್ ಅವರೊಂದಿಗೆ ಸೇರಿ ₹141.01 ಕೋಟಿ ಲಂಚ ಪಡೆದಿದ್ದಾರೆ. ಅವರಿಗೆ 24ವರ್ಷ ಜೈಲು ಶಿಕ್ಷೆ ಹಾಗೂ ₹109.42 ಕೋಟಿ ದಂಡ ವಿಧಿಸಿದ್ದೇವೆ’ ಎಂದು ನ್ಯಾಯಮೂರ್ತಿ ಕಿಮ್ ಸೇ– ಯೊನ್ ಹೇಳಿದ್ದಾರೆ.

ನ್ಯಾಯಾಂಗ ಬಂಧನದಲ್ಲಿದ್ದ ಅವರು ವಿಚಾರಣೆಗಳಿಗೆ ಹಾಜರಾಗದೆ ಪ್ರತಿಭಟಸಿದ್ದರು. ಶುಕ್ರವಾರ ಜೈಲು ಶಿಕ್ಷೆ ಪ್ರಕಟವಾದ ಸಂದರ್ಭದಲ್ಲೂ ಅವರು ನ್ಯಾಯಾಲಯದಲ್ಲಿ  ಹಾಜರಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry