ನನ್ನ ಬಾಳಿನ ಸ್ಫೂರ್ತಿ ನನ್ನ ತಾಯಿ

7

ನನ್ನ ಬಾಳಿನ ಸ್ಫೂರ್ತಿ ನನ್ನ ತಾಯಿ

Published:
Updated:

ನನ್ನ ಬಾಳಿನ ಸ್ಫೂರ್ತಿ ನನ್ನ ತಾಯಿ. ಚಿಕ್ಕ ವಯಸ್ಸಿಗೇ ವಿಧವೆಯಾಗಿ ಮೂರು ಮಕ್ಕಳನ್ನು  ದಡ ಸೇರಿಸಲು ನಡೆಸಿದ ಜೀವನ ಯಾತ್ರೆಯೇ ನನ್ನ ಬದುಕಿಗೂ ಸ್ಫೂರ್ತಿಯ ಸ್ಥಾಯಿ. ಅನಕ್ಷರಸ್ಥೆಯಾಗಿದ್ದೂ, ಏಕಾಂಗಿಯಾಗಿ ಬೆಂಗಳೂರು ಎನ್ನೋ ಮಾಯಾನಗರಿಯಲ್ಲಿ  ಅವಳು ನಡೆಸಿದ ಹೋರಾಟ ಅಸಾಧಾರಣ. ಎಂತಹುದೇ ಸಮಸ್ಯೆಗಳು ಎದುರಾದರೂ ಧೃತಿಗೆಡದೆ  ಮೆಟ್ಟಿನಿಂತ ಪರಿ ಅಸಾಮಾನ್ಯ.

ಕಷ್ಟ ಸಹಿಷ್ಣುತೆ, ಛಲ, ದಿಟ್ಟ ಹೋರಾಟ ಅವಳಿಂದ ನಾನು ಕಲಿತ ಪಾಠ. ಸದಾ ಚಟುವಟಿಕೆ. ಸೋಮಾರಿತನ ಸುಳಿಯಗೊಡದ ಕ್ರಿಯಾ ಶೀಲ ಚೈತನ್ಯ. ಎಂದಿಗೂ ಬತ್ತದ ಜೀವನೋತ್ಸಾಹ. ದಣಿಯದ ಅವಳ  ಮನೋಸ್ಥೈರ್ಯ, ಮನೋದಾರ್ಢ್ಯ ನನಗೆ ನೀಡುತ್ತಿದೆ ನಿತ್ಯ ಧೈರ್ಯ. ಒಂಟಿತನದ ನೋವು ನುಂಗಿಕೊಂಡೇ ಮಕ್ಕಳ ಏಳಿಗೆಗೆ ಅವಳ ಒಂಟೆತ್ತಿನ ದುಡಿತ ನನಗೆ ಮಾದರಿ. ಅವಮಾನಿಸಿದವರ , ಅನುಮಾನಿಸಿದವರ ಮುಖಕ್ಕೆ ಹೊಡೆದಂತೆ ಬಾಳ್ವೆ ನಡೆಸಿ ದ್ವಿಗ್ವಿಜಯ ಸಾಧಿಸಿದ ಪರಿ ನನಗೆ ಸದಾ ಅನುಕರಣೀಯ. 

ಶಾಲೆಯಲ್ಲಿ ಕಲಿಯದೆ ಬದುಕಿನ ಪಯಣ ಕಲಿಸಿದ ಎಲ್ಲ ಪಾಠಗಳನ್ನು ಶ್ರದ್ಧೆಯಿಂದ ಕಲಿತು ನಮಗೂ ಕಲಿಸಿದ ಮಹಾ ಗುರು ಅವಳು. ದುಡಿಮೆಯೇ ದುಡ್ಡಿನ ತಾಯಿ ಇದು ಅಮ್ಮ ಕಲಿಸಿದ ಮಂತ್ರ. ಯಶಸ್ಸಿಗೆ ಅಡ್ಡ ದಾರಿಗಳಿಲ್ಲ ರಾಜಮಾರ್ಗವೇ ಸುರಕ್ಷಿತ.

ಇದು ಅವಳ ಆದರ್ಶ.  ಕಠಿಣ ಪರಿಶ್ರಮ, ನಿರಂತರ ಹೋರಾಟವೊಂದೇ ಯಶಸ್ಸಿಗೆ ದಾರಿ ಇದು ಅವಳ ಮಾದರಿ. ಹೀಗಾಗಿ ಗುರುವಲ್ಲದ ಗುರು, ಜಗದ್ಗುರು, ಮಹಾ ಗುರು ಎಲ್ಲವೂ ನನಗೆ ನನ್ನ ತಾಯಿಯೇ.ಅವಳಿಗೆ ಸಾವಿರದ ಶರಣು. ಸಾವಿರದ ಶರಣು. ಸಾವಿರದ ಶರಣವ್ವ ಪುಟ್ಟಮ್ಮ ತಾಯೇ...ತಾಯೇ ತಾಯೇ.

-ಮಂಜುನಾಥ್ ಸಿ ನೆಟ್ಕಲ್

ಸಹಾಯಕ ಪ್ರಾಧ್ಯಾಪಕ

ಬೆಂಗಳೂರು ೧೨.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry