ಸ್ವೀಡಿಶ್‌ ಅಕಾಡೆಮಿಗೆ ಮೂವರ ರಾಜೀನಾಮೆ

7
ಲೈಂಗಿಕ ಹಗರಣದ ಆರೋಪಿ ಜತೆಗೆ ಅಕಾಡೆಮಿ ನಂಟಿಗೆ ಆಕ್ಷೇಪ

ಸ್ವೀಡಿಶ್‌ ಅಕಾಡೆಮಿಗೆ ಮೂವರ ರಾಜೀನಾಮೆ

Published:
Updated:

ಸ್ಟಾಕ್‌ಹೋಮ್‌: ಲೈಂಗಿಕ ದೌರ್ಜನ್ಯ ಹಗರಣದ ಆರೋಪ ಎದುರಿಸುತ್ತಿರುವ ಸ್ವೀಡನ್ನಿನ ಹಿರಿಯ ಸಾಹಿತಿಯೊಬ್ಬರು ನೊಬೆಲ್‌ ಪ್ರಶಸ್ತಿ ನೀಡುವ ಸ್ವೀಡಿಶ್‌ ಅಕಾಡೆಮಿ ಜತೆಗೆ ನಿಕಟ ಸಂಬಂಧ ಹೊಂದಿರುವುದನ್ನು ಪ್ರತಿಭಟಿಸಿ, ಅಕಾಡೆಮಿಯ ಮೂವರು ಪ್ರಮುಖ ಸದಸ್ಯರು ಶನಿವಾರ ರಾಜೀನಾಮೆ ನೀಡಿದ್ದಾರೆ.

ಈ ಹಗರಣದ ಪ್ರಮುಖ ವ್ಯಕ್ತಿ ವಿರುದ್ಧ ಕಳೆದ ನವೆಂಬರ್‌ನಲ್ಲಿ ‘ಮಿ ಟೂ ಹ್ಯಾಷ್‌ಟ್ಯಾಗ್‌’ ಆಂದೋಲನವೇ ಆರಂಭವಾಗಿತ್ತು. ಅಕಾಡೆಮಿಯ ಸದಸ್ಯರು, ಸದಸ್ಯರ ಪತ್ನಿಯರು ಮತ್ತು ಅವರ ಪುತ್ರಿಯರು ಈ ವ್ಯಕ್ತಿಯಿಂದ ‘ನಾವೂ ಸಹ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದೇವೆ’ ಎಂದು ಆರೋಪಿಸಿದ್ದರು.

ಆಗಿನಿಂದ ಸ್ವೀಡಿಶ್ ಅಕಾಡೆಮಿಯು ಈ ವ್ಯಕ್ತಿಯೊಂದಿಗೆ ಹೊಂದಿದ್ದ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿತ್ತು. ಈಗ ಪುನಃ ಆತನೊಂದಿಗೆ ಅಕಾಡೆಮಿ ನಂಟು ಮುಂದುವರಿಸಿ

ರುವುದನ್ನು ಖಂಡಿಸಿ ಸದಸ್ಯರಾದ ಪೀಟರ್‌ ಇಂಗ್ಲುಂಡ್‌, ಕ್ಲಾಸ್ ಓಸ್ಟರ್‌ಗ್ರೇನ್ ಮತ್ತು ಕೆಜೆಲ್ ಎಸ್ಮಾರ್ಕ್ ರಾಜೀನಾಮೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry