ಭಾನುವಾರ, ಡಿಸೆಂಬರ್ 8, 2019
19 °C
ವಾಂಖೆಡೆಯಲ್ಲಿ ಮಿಂಚಿದ ಕೃಣಾಲ್ ಪಾಂಡ್ಯ, ಸೂರ್ಯಕುಮಾರ್ ಯಾದವ್

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರೋಚಕ ಗೆಲುವು

Published:
Updated:
ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರೋಚಕ ಗೆಲುವು

ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ಶನಿವಾರ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಎದುರು ಸೋಲು ಕಂಡಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಮಹೇಂದ್ರಸಿಂಗ್ ದೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಅನುಭವಿ ಆಟಗಾರ ಶೇನ್ ವಾಟ್ಸನ್ (29ಕ್ಕೆ2 ಅವರು ಆರಂಭದಲ್ಲಿಯೇ ಆಘಾತ ನೀಡಿದರು. ಇದರಿಂದಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 165 ರನ್‌ ಗಳಿಸಿತು. ಸಹೋದರರಾದ ಹಾರ್ದಿಕ್ ಪಾಂಡ್ಯ (ಔಟಾಗದೆ22)ಮತ್ತು ಕೃಣಾಲ್ ಪಾಂಡ್ಯ (ಔಟಾಗದೆ 41; 22ಎ, 5ಭೌಂ, 2ಸಿ) ಮುರಿಯದ ಐದನೇ ವಿಕೆಟ್‌ಗೆ 52 ರನ್‌ ಸೇರಿಸಿದರು.

ಆತಿಥೇಯ ತಂಡವು 20 ರನ್‌ಗಳನ್ನು ಸೇರಿಸುವಷ್ಟರಲ್ಲಿ  ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಎವಿನ್ ಲೂಯಿಸ್  ದೀಪಕ್ ಚಾಹರ್ ಬೌಲಿಂಗ್‌ನಲ್ಲಿ  ಎಲ್‌ಬಿಡಬ್ಲ್ಯು ಆದರು. ನಾಯಕ ರೋಹಿತ್ ಶರ್ಮಾ (15 ರನ್) ಅವರು ಶೇನ್ ವಾಟ್ಸನ್ ಬೌಲಿಂಗ್‌ನಲ್ಲಿ ಅಂಬಟಿ ರಾಯುಡುಗೆ ಕ್ಯಾಚಿತ್ತರು. ನಂತರ ಯುವ ಆಟಗಾರ ಇಶಾನ್ ಕಿಶನ್ (40; 29ಎ, 4ಬೌಂ, 1ಸಿ) ಮತ್ತು ಸೂರ್ಯಕುಮಾರ್ ಯಾದವ್ (43; 29ಎ, 6ಬೌಂ, 1ಸಿ) ಅವರು ಮೂರನೇ ವಿಕೆಟ್‌ಗೆ 70 ರನ್‌ಗಳನ್ನು ಸೇರಿಸಿದರು.  ಆದರೆ 13ನೇ ಓವರ್‌ನಲ್ಲಿ ಶೇನ್ ವಾಟ್ಸನ್‌ ಅವರು ಯಾದವ್ ವಿಕೆಟ್ ಕಬಳಿಸಿ ಜೊತೆಯಾಟವನ್ನು ಮುರಿದರು. ಇಶಾನ್ ಅವರು 15ನೇ ಓವರ್‌ನಲ್ಲಿ ಔಟಾದರು.

ಪತ್ರಿಕೆಯು ಮುದ್ರಣಕ್ಕೆ ಹೋಗುವ ವೇಳೆಗೆ ಚೆನ್ನೈ ತಂಡವು 3.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 21 ರನ್‌ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 165 (ರೋಹಿತ್ ಶರ್ಮಾ 15, ಇಶಾನ್ ಕಿಶನ್ 40, ಸೂರ್ಯಕುಮಾರ್ ಯಾದವ್ 43, ಹಾರ್ದಿಕ್ ಪಾಂಡ್ಯ ಔಟಾಗದೆ 22,  ಕೃಣಾಲ್ ಪಾಂಡ್ಯ ಔಟಾಗದೆ 41) ವಿವರ ಅಪೂರ್ಣ

ಪ್ರತಿಕ್ರಿಯಿಸಿ (+)