ಭಾನುವಾರ, ಡಿಸೆಂಬರ್ 15, 2019
25 °C

ಕೇರಳದ ಚಾಲಕನಿಗೆ ₹ 21.21ಕೋಟಿ ದುಬೈ ಲಾಟರಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೇರಳದ ಚಾಲಕನಿಗೆ  ₹ 21.21ಕೋಟಿ ದುಬೈ ಲಾಟರಿ

ದುಬೈ : ಇಲ್ಲಿನ ಖಾಸಗಿ ಕಂಪನಿಯಲ್ಲಿ ಚಾಲಕರಾಗಿರುವ ಕೇರಳದ ಜಾನ್‌ ವರ್ಗೀಸ್‌ ಅವರು ಬಿಗ್‌ ಟಿಕೆಟ್‌ ರಾಫೆಲ್‌ ಲಾಟರಿಯಲ್ಲಿ  ₹21.20 ಕೋಟಿ ಗೆದ್ದುಕೊಂಡಿದ್ದಾರೆ.

ವರ್ಗೀಸ್‌, 2016ರಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಫೆಲ್‌ ಟಿಕೆಟ್‌ ಅನ್ನು ಸಾಮಾನ್ಯವಾಗಿ ಗೆಳೆಯರು ಒಟ್ಟಾಗಿ ಖರೀದಿಸುತ್ತಾರೆ. ಬಹುಮಾನದ ಮೊತ್ತವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ವರ್ಗೀಸ್‌ ಕೂಡ ನಾಲ್ಕು ಮಂದಿ ಸ್ನೇಹಿತರೊಂದಿಗೆ ಈ ಹಣವನ್ನು ಹಂಚಿಕೊಳ್ಳಲಿದ್ದಾರೆ.

ಕಳೆದ ಜನವರಿಯಲ್ಲಿ ರಾಫೆಲ್‌ ಟಿಕೆಟ್‌ ಲಾಟರಿಯನ್ನು ಕೇರಳದ ವ್ಯಕ್ತಿಯೇ ಗೆದ್ದಿದ್ದರು. ಆಗಸ್ಟ್‌ನಲ್ಲಿ ಭಾರತೀಯ ವ್ಯಕ್ತಿ ₹ 8.83 ಕೋಟಿ ತಮ್ಮದಾಗಿಸಿಕೊಂಡಿದ್ದರು. ಕಳೆದ ಅಕ್ಟೋಬರ್‌ನಿಂದ ಅಬುಧಾಬಿಯಲ್ಲಿ ನಡೆದ ಮೆಗಾ ರಾಫೆಲ್‌ ಡ್ರಾನಲ್ಲಿ ವಿಜೇತರಾದ ಹತ್ತು ಜನರಲ್ಲಿ ಎಂಟು ಮಂದಿ ಭಾರತೀಯರೇ ಆಗಿದ್ದಾರೆ.

‘ನನಗೆ ಈ ವಿಷಯವನ್ನು ನಂಬಲು ಸಾಧ್ಯವೇ ಆಗಲಿಲ್ಲ. ಗೆಳೆಯರು ‘ಏಪ್ರಿಲ್‌ ಫೂಲ್‌’ ಮಾಡುತ್ತಿದ್ದಾರೆ ಎಂದೇ ಭಾವಿಸಿದ್ದೆ. ಯಾರೋ ತಮಾಷೆಗೆ ಕರೆ ಮಾಡಿರಬಹುದು ಎಂದುಕೊಂಡಿದ್ದೆ. ಮನೆಗೆ ಕರೆ ಮಾಡಿ ವಿಷಯ ಹೇಳಲು ಕೆಲ ಸಮಯ ತೆಗೆದುಕೊಂಡಿದ್ದೆ. ನಮ್ಮದು ಪುಟ್ಟ ಕುಟುಂಬ. ಮಕ್ಕಳ ಭವಿಷ್ಯಕ್ಕಾಗಿ ಈ ಹಣವನ್ನು ಹೂಡಿಕೆ ಮಾಡುತ್ತೇನೆ. ಸ್ವಲ್ಪ ಹಣವನ್ನು ಬಡವರಿಗೆ ನೀಡುವ ಯೋಚನೆಯೂ ಇದೆ. ನನ್ನ ಹಿಂದಿನ ಪರಿಸ್ಥಿತಿಯನ್ನು ಎಂದಿಗೂ ಮರೆಯುವುದಿಲ್ಲ’ ಎಂದಿದ್ದಾರೆ ವರ್ಗೀಸ್‌.

ಪ್ರತಿಕ್ರಿಯಿಸಿ (+)