ಶುಕ್ರವಾರ, ಡಿಸೆಂಬರ್ 6, 2019
26 °C

ಅತ್ಯಾಚಾರ ಆರೋಪ:ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಸಹೋದರ ಅತುಲ್ ಬಂಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅತ್ಯಾಚಾರ ಆರೋಪ:ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಸಹೋದರ ಅತುಲ್ ಬಂಧನ

ಉನ್ನಾವ್ (ಉತ್ತರ ಪ್ರದೇಶ): ಅತ್ಯಾಚಾರ ಆರೋಪ ಸಂಬಂಧ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಸಹೋದರ ಅತುಲ್ ಸೆಂಗರ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ಥೆ, ಕುಲದೀಪ್ ಸೆಂಗರ್ ಅವರನ್ನು ಬಂಧನಕ್ಕೊಳಪಡಿಸಿಲ್ಲ. ಇನ್ನೂ ಸಹೋದರನನ್ನು ಬಂಧಿಸಿರುವುದರ ಬಗ್ಗೆ ತಿಳಿದಿಲ್ಲ. ಇವರನ್ನು ಮರಣದಂಡನೆಗೆ ಒಳಪಡಿಸಬೇಕೆಂಬುದು ನನ್ನ ಬೇಡಿಕೆ. ಇವರಿಂದ ನನ್ನ ಬದುಕು ಶೋಚನೀಯವಾಗಿದೆ. ನನಗೆ ನ್ಯಾಯ ಬೇಕು. ನನ್ನ ತಂದೆಯನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿದ್ದ‍ ಸಂತ್ರಸ್ಥೆಯ ತಂದೆ ಪಪ್ಪು ಸಿಂಗ್ ಅವರನ್ನು ಭಾನುವಾರ ರಾತ್ರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸೋಮವಾರ ಅವರು ಸಾವನ್ನಪ್ಪಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಆರೋಪವನ್ನು ಸೆಂಗರ್‌ ಅಲ್ಲಗಳೆದಿದ್ದಾರೆ. ‘ಇದು ವಿರೋಧ ಪಕ್ಷದವರು ನನ್ನ ಘನತೆ ಹಾಳುಮಾಡಲು ಹೆಣೆದಿರುವ ರಾಜಕೀಯ ಸಂಚು. ಯಾವುದೇ ತನಿಖೆ ಎದುರಿಸಲು ಸಿದ್ಧ’ ಎಂದು ಹೇಳಿದ್ದಾರೆ.

ಇದನ್ನೂ ಓದಿ...

ಸಂತ್ರಸ್ತೆಯ ತಂದೆ ಜೈಲಲ್ಲಿ ಸಾವು

ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪ

ಪ್ರತಿಕ್ರಿಯಿಸಿ (+)