ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆ ಕಾಟದ ದೂರು ನೀಡಿದ ಪ್ರಯಾಣಿಕನನ್ನು ವಿಮಾನದಿಂದ ಇಳಿಸಿದ ಇಂಡಿಗೊ ಸಿಬ್ಬಂದಿ: ಆರೋಪ

Last Updated 10 ಏಪ್ರಿಲ್ 2018, 12:31 IST
ಅಕ್ಷರ ಗಾತ್ರ

ನವದೆಹಲಿ: ಸೊಳ್ಳೆ ಕಾಟದ ಬಗ್ಗೆ ದೂರು ನೀಡಿದ್ದಕ್ಕೆ ಇಂಡಿಗೊ ಸಿಬ್ಬಂದಿ ತಮ್ಮನ್ನು ಬಲವಂತವಾಗಿ ವಿಮಾನದಿಂದ ಕೆಳಗಿಳಿಸಿದ್ದಾರೆ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.

‘ಲಖನೌದಿಂದ ಬೆಂಗಳೂರಿಗೆ ಹೊರಡಬೇಕಿದ್ದ ಇಂಡಿಗೊ ವಿಮಾನದಲ್ಲಿ ಸೊಳ್ಳೆ ಇರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ನಂತರ ನನ್ನನ್ನು ಬಲವಂತವಾಗಿ ಕೆಳಗಿಳಿಸಲಾಗಿದೆ’ ಎಂದು ವೈದ್ಯ ಸೌರಭ್ ‌ರೈ ಎಂಬುವವರು ಆರೋಪಿಸಿದ್ದಾರೆ.

‘ಸೌರಭ್ ಅವರ ಆಕ್ಷೇಪದ ಬಗ್ಗೆ ಕ್ರಮ ಕೈಗೊಳ್ಳಲು ನಾವು ಯೋಚಿಸುವ ಮುನ್ನವೇ ಅವರು ಆಕ್ರಮಣಕಾರಿಯಾಗಿ ವರ್ತಿಸಲು ಆರಂಭಿಸಿದರು. ಬೆದರಿಕೆಯ ಮಾತುಗಳನ್ನಾಡಿದ ಅವರು ‘ಹೈಜಾಕ್’ ಪದವನ್ನೂ ಬಳಸಿದರು. ವಿಮಾನವನ್ನು ಹಾನಿಗೊಳಿಸುವಂತೆ ಸಹಪ್ರಯಾಣಿಕರನ್ನು ಪ್ರೇರೇಪಿಸಲು ಪ್ರಯತ್ನಪಟ್ಟರು’ ಎಂದು ವಿಮಾನ ಸಂಸ್ಥೆ ಸರಣಿ ಟ್ವೀಟ್ ಮಾಡಿದೆ. ಆದರೆ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿಲ್ಲ.

ಇದಕ್ಕೆ ಪ್ರತಿಯಾಗಿ ಸೌರಭ್ ಅವರು, ‘ನನ್ನ ಮೇಲೆ ಇಷ್ಟೆಲ್ಲ ಆರೋಪಗಳಿದ್ದರೆ ಇಂಡಿಗೊ ಸಿಬ್ಬಂದಿ ಏಕೆ ನನ್ನನ್ನು ಮತ್ತು ನನ್ನ ಚೀಲಗಳನ್ನು ತಪಾಸಣೆ ನಡೆಸಿಲ್ಲ. ಮತ್ತೊಂದು ವಿಮಾನದಲ್ಲಿ ಪ್ರಯಾಣ ಮಾಡಲು ಏಕೆ ಅವಕಾಶ ನೀಡಿದರು’ ಎಂದು ಪ್ರಶ್ನಿಸಿದ್ದಾರೆ.

ತನಿಖೆಗೆ ಸೂಚನೆ: ಇಂಡಿಗೊ ವಿಮಾನದ ಸಿಬ್ಬಂದಿ ಪ್ರಯಾಣಿಕರೊಬ್ಬರನ್ನು ಲಖನೌ ನಿಲ್ದಾಣದಲ್ಲಿ ಬಲವಂತವಾಗಿ ವಿಮಾನದಿಂದ ಇಳಿಸಿದ ಪ್ರಕರಣದ ತನಿಖೆಗೆ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT