ಬಿಜೆಪಿಯ #ಜಂಗಲ್‌ರಾಜ್‌

7

ಬಿಜೆಪಿಯ #ಜಂಗಲ್‌ರಾಜ್‌

Published:
Updated:

ಬಿಜೆಪಿಯ ತಾರಾ ಪ್ರಚಾರಕ ಯೋಗಿ ಆದಿತ್ಯನಾಥ ಕರ್ನಾಟಕದಲ್ಲಿ ನಾಪತ್ತೆಯಾಗಿದ್ದಾರೆ. ಅವರ ರಾಜ್ಯದಲ್ಲಿ ಅತ್ಯಾಚಾರ ಮಾಡಿದವರನ್ನು ರಕ್ಷಿಸುವುದರಲ್ಲಿ ಅವರು ಬಿಜಿಯಾಗಿದ್ದಾರೆ. ಬಿಜೆಪಿಯ #ಜಂಗಲ್‌ರಾಜ್‌ನಲ್ಲಿ, ಬಿಜೆಪಿ ಮುಖಂಡರಿಂದ ಹೆಣ್ಣು ಮಕ್ಕಳನ್ನು ರಕ್ಷಿಸಬೇಕಿದೆ (ಬೇಟಿ ಬಚಾವೊ).

–ಕರ್ನಾಟಕ ಕಾಂಗ್ರೆಸ್‌ @INCKarnataka

ಕಾರ್ಗಿಲ್‌ ಮತ್ತು ಟೊಲೊಲಿಂಗ್‌ ಶಿಖರದ ಹೀರೊ ಕರ್ನಲ್‌ ಎಂ.ಬಿ. ರವೀಂದ್ರನಾಥ್‌ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ಮಾಡಲಾಯಿತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಿಷ್ಠ ಸಂತಾಪವನ್ನೂ ಸೂಚಿಸಲಿಲ್ಲ. ಗೌರಿ ಲಂಕೇಶ್‌ ಮೃತಪಟ್ಟಾಗ ಅವರಿಗೆ ಸರ್ಕಾರಿ ಗೌರವ ನೀಡಲು ಮಾತ್ರ ಅತ್ಯುತ್ಸಾಹ ತೋರಿದರು. ಮುಖ್ಯಮಂತ್ರಿಗಳ ಪ್ರಕಾರ, ಹಿಂದೂಗಳನ್ನು ವಿರೋಧಿಸುವುದು ಸರ್ಕಾರಿ ಗೌರವಕ್ಕೆ ಅರ್ಹವಾಗುತ್ತದೆ. ಸಮರ ಕಲಿಗಳಿಗೆ ಆ ಅರ್ಹತೆ ಇಲ್ಲ!

–ಬಿಜೆಪಿ ಕರ್ನಾಟಕ, @BJP4Karnataka

ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಅವೆರಡೂ ಧರ್ಮ ಮತ್ತು ಜಾತಿ ರಾಜಕಾರಣ ಮಾಡುತ್ತವೆ. ಎರಡು ಕೂಡ ಸಮಾನ ಭ್ರಷ್ಟ ಪಕ್ಷಗಳು. ಕರ್ನಾಟಕದಿಂದ ಅವುಗಳನ್ನು ಬುಡಸಮೇತ ಕಿತ್ತುಹಾಕುವುದಕ್ಕೆ ಇದು ಸರಿಯಾದ ಸಮಯ.

-ಎಎಪಿ ಕರ್ನಾಟಕ, @AAPKarnataka

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry