ಹೆಣ್ಣು– ಚಿನ್ನ

7

ಹೆಣ್ಣು– ಚಿನ್ನ

Published:
Updated:

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ನಾರಿಯರು ಚಿನ್ನದ ಬೇಟೆಯಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ‘ಹೆಣ್ಣೊಂದು ಹುಟ್ಟಿತೆಂದರೆ ಹುಣ್ಣೊಂದು ಹುಟ್ಟಿದಂತೆ’ ಎಂದು ಆಡಿಕೊಳ್ಳುವ ಕಾಲವೊಂದಿತ್ತು. ಈ ಮಹಿಳೆಯರ ಸಾಧನೆಯಿಂದಾಗಿ ಆ ಮಾತು ಬದಲಾಗಿ ‘ಹೆಣ್ಣೊಂದು ಹುಟ್ಟಿತೆಂದರೆ ಚಿನ್ನ ಹುಟ್ಟಿದಂತೆ’ ಎನ್ನುವಂತಾಗಿದೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸ್‍ನಲ್ಲಿ ಮೋನಿಕಾ ಭಾತ್ರಾ, ಮಧುರಿಕಾ ಪಾಟ್ಕರ್‌, ಮೌಮಾ ದಾಸ್, ಭಾರ ಎತ್ತುವುದರಲ್ಲಿ ಪೂನಂ ಯಾದವ್‌, ಪಿಸ್ತೂಲ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡ ಹೀನಾ ಸಿದು ಹಾಗೂ ಏರ್ ಪಿಸ್ತೂಲ್‌ನಲ್ಲಿ ಚಿನ್ನದ ಪದಕ ಗೆದ್ದ ಮನು ಭಾಕರ್‌, ಬ್ಯಾಡ್ಮಿಂಟನ್‍ನಲ್ಲಿ ಸೈನಾ ನೆಹ್ವಾಲ್‌, ಅಶ್ವಿನಿ ಪೊನ್ನಪ್ಪ ಮುಂತಾದವರು ಮಹಿಳಾ ಕುಲಕ್ಕೆ ಹೆಮ್ಮೆ ಮೂಡಿಸಿದ್ದಾರೆ.

-ಶ್ರೀನಿವಾಸ ಧ. ವಾಲಿ, ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry