ಬಟ್ಟೆ ಒಗೆದು ಪ್ರತಿಭಟನೆ ಎಚ್ಚರಿಕೆ

7

ಬಟ್ಟೆ ಒಗೆದು ಪ್ರತಿಭಟನೆ ಎಚ್ಚರಿಕೆ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮಡಿವಾಳ ಜನಾಂಗದ ಮುಖಂಡರಿಗೆ ಟಿಕೆಟ್ ಘೋಷಣೆ ಮಾಡದೇ ಇದ್ದಲ್ಲಿ, ಏಪ್ರಿಲ್‌14ರಂದು (ಅಂಬೇಡ್ಕರ್ ಜಯಂತಿ) ಮೂರು ಪಕ್ಷಗಳ ಕಚೇರಿಯ ಎದುರು ಬಟ್ಟೆ ಒಗೆದು ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತೀಯ ರಜಕ(ಮಡಿವಾಳ) ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಜೆ.ಎಂಜೇರಪ್ಪ ತಿಳಿಸಿದರು.

ಇಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್‌ಗಾಗಿ ಈಗಾಗಲೇ ಮೂರೂ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದು, ಭರವಸೆ ನೀಡಿದ್ದಾರೆ ಎಂದರು.

ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಗೋಪಿಕೃಷ್ಣ, ಬೇಲೂರು ಕ್ಷೇತ್ರದಿಂದ ಬೇಲೂರು ಲಕ್ಷ್ಮಣ ಅವರಿಗೆ ಬಿಜೆಪಿಯಿಂದ, ಸೊರಬದಲ್ಲಿ ರಾಜು ತಲ್ಲೂರು ಅವರಿಗೆ ಕಾಂಗ್ರೆಸ್‌ನಿಂದ ಮತ್ತು ಕಾರ್ಕಳ ಕ್ಷೇತ್ರದಿಂದ ಸತೀಶ್ ಸಾಲಿಯಾನ್ ಅವರಿಗೆ ಜೆಡಿಎಸ್‍ನಿಂದ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ಮಡಿವಾಳ ಯುವ ವೇದಿಕೆಯ ಕಾರ್ಯಾಧ್ಯಕ್ಷ ಚಂದ್ರು ವಸಂತಪುರ. ಉಪಾಧ್ಯಕ್ಷ ರಮೇಶ್‌, ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಯುವ ವೇದಿಕೆಯ ಉಪಾಧ್ಯಕ್ಷ ರಾಜು ಬಳ್ಳೂರು, ಸಂಘಟನಾ ಕಾರ್ಯದರ್ಶಿ ಸಂತೋಷ್, ಖಜಾಂಚಿ

ಡಿ.ವಿ.ಹಾಲಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry