5

ಅಂತರ್ಜಲ ಮಟ್ಟ ಹೆಚ್ಚಬೇಕು

Published:
Updated:

ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಸಣ್ಣಪುಟ್ಟ ರಸ್ತೆಗಳಿಗೂ ಟಾರ್‌ ವ್ಯವಸ್ಥೆ ಆಗಿದೆ. ಉತ್ತಮವಾದ ಬೀದಿ ದೀಪಗಳನ್ನು ಹಾಕಿದ್ದಾರೆ. ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಆಗಿದೆ. ಪಾರ್ಕ್‌ಗಳಲ್ಲಿ ಓಡಾಡಲು ಬೇಕಾದ ಟ್ರ್ಯಾಕ್‌, ಜಿಮ್‌ ವ್ಯವಸ್ಥೆಗಳು ಉತ್ತಮಗೊಂಡಿವೆ. ಎರಡು ಸಲ ಆಯ್ಕೆಯಾಗಿರುವ ಎಲ್‌.ಎ. ರವಿಸುಬ್ರಹ್ಮಣ್ಯ ಈ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ.

ಆದರೆ, ಕಸ ವಿಲೇವಾರಿ ಸಮಸ್ಯೆ ಇಲ್ಲಿಯ ಜನರನ್ನು ಕಾಡುತ್ತಿದೆ. ಕಸದ ಗಾಡಿ ಸರಿಯಾಗಿ ಬರುತ್ತಿಲ್ಲ. ಹಸಿರು ಹೆಚ್ಚಿಸುವ ಕೆಲಸ ಆಗಬೇಕು. ಅಂತರ್ಜಲ ಮಟ್ಟ ಕುಸಿಯುತ್ತಲೇ ಇರುವುದು ಆಘಾತಕಾರಿ. ಹೀಗಾಗಿ ಇನ್ನಷ್ಟು ಇಂಗುಗುಂಡಿ ನಿರ್ಮಾಣ ಮಾಡಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಬಗೆಗೆ ಶಾಸಕರು ಯೋಚಿಸಬೇಕು. ಯಾರು ಕ್ಷೇತ್ರಾಭಿ

ವೃದ್ಧಿಗಾಗಿ ಕೆಲಸ ಮಾಡುತ್ತಾರೋ ಅವರಿಗೇ ನಮ್ಮ ಓಟು...

–ಕಾಳಿ ಪ್ರಸಾದ್‌, ಕಿರುಚಿತ್ರ ನಿರ್ಮಾಪಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry