ಮಂಗಳವಾರ, ಜೂಲೈ 7, 2020
27 °C
ಅಕ್ಟೋಬರ್ 19 ರಿಂದ ಪ್ರೊ ಕಬಡ್ಡಿ ಲೀಗ್ ಟೂರ್ನಿ

ಕಬಡ್ಡಿ: ಬೆಂಗಳೂರು ಬುಲ್ಸ್‌ನಲ್ಲಿ ಉಳಿದ ರೋಹಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬಡ್ಡಿ: ಬೆಂಗಳೂರು ಬುಲ್ಸ್‌ನಲ್ಲಿ ಉಳಿದ ರೋಹಿತ್

ಬೆಂಗಳೂರು: ಈ ವರ್ಷದ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಆಡಲಿರುವ ಬೆಂಗ ಳೂರು ಬುಲ್ಸ್‌ ತಂಡವು  ರೋಹಿತ್ ಕುಮಾರ್ ಅವರನ್ನು ಉಳಿಸಿಕೊಂಡಿದೆ.

ಹೋದ ವರ್ಷದ ಟೂರ್ನಿಯಲ್ಲಿ ತಂಡವನ್ನು ರೋಹಿತ್  ಮುನ್ನಡೆಸಿದ್ದರು. ಅಕ್ಟೋಬರ್ 19 ರಿಂದ ಆರಂಭ ವಾಗಲಿರುವ ಆರನೆ ಆವೃತ್ತಿಯ ಟೂರ್ನಿಯಲ್ಲಿ ಆಡುವ ತಂಡಗಳು ಒಟ್ಟು 21 ಆಟಗಾರರನ್ನು ಉಳಿಸಿಕೊಂಡಿವೆ. 

ಯು ಮುಂಬಾ, ತೆಲುಗು ಟೈಟನ್ಸ್ ಹಾಗೂ ಪಟ್ನಾ ಪೈರೇಟ್ಸ್ ತಂಡಗಳು ಕ್ರಮವಾಗಿ  ಅನೂಪ್ ಕುಮಾರ್, ರಾಹುಲ್ ಚೌಧರಿ ಹಾಗೂ ಮೋನು ಗೋಯೆತ್ ಅವರನ್ನು ಕೈಬಿಟ್ಟಿವೆ.

ತಂಡಗಳು ಉಳಿಸಿಕೊಂಡ ಆಟಗಾರರು: 

ಸುರ್ಜೀತ್ ಸಿಂಗ್, ಮಣಿಂದರ್ ಸಿಂಗ್ (ಬೆಂಗಾಲ್ ವಾರಿಯರ್ಸ್)

ಮಿರಾಜ್ ಶೇಖ್ (ದಬಂಗ್ ಡೆಲ್ಲಿ)

ಸಚಿನ್ ತನ್ವರ್, ಸುನಿಲ್ ಕುಮಾರ್, ಮಹೇಂದರ್, ಗಣೇಶ್ ರಜಪೂತ್ (ಗುಜರಾತ್ ಫಾರ್ಚೂನ್'ಜೈಂಟ್ಸ್)

ಕುಲದೀಪ್ ಸಿಂಗ್ (ಹರಿಯಾಣ ಸ್ಟೀಲರ್ಸ್)

ಪ್ರದೀಪ್ ನರ್ವಾಲ್, ಜೈದೀಪ್, ಜವಾಹರ್ ಡಾಗರ್, ಮನೀಷ್ ಕುಮಾರ್ (ಪಟ್ನಾ ಪೈರೇಟ್ಸ್)

ಸಂದೀಪ್ ನರ್ವಾಲ್, ರಾಜೇಶ್ ಮಂಡಲ್, ಮೋರೆ ಜಿಬಿ, ಗಿರೀಶ್ ಎರ್ನಾಕ್ (ಪುಣೇರಿ ಪಲ್ಟನ್)

ಅಜಯ್ ಠಾಕೂರ್, ಅಮಿತ್ ಹೂಡಾ, ಸಿ. ಚರಣ್ (ತಮಿಳ್ ತಲೈವಾಸ್)

ನೀಲೇಶ್ ಸಾಳುಂಕೆ, ಮೋಹಸೀನ್ ಮಗ್ಸೊದುಲ್ ಜಾಫ್ರಿ (ತೆಲುಗು ಟೈಟನ್ಸ್)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.