ಸಿಂಬು ಮನವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೌಹಾರ್ಧತೆ ಮೆರೆದ ಕನ್ನಡಿಗರು

7

ಸಿಂಬು ಮನವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೌಹಾರ್ಧತೆ ಮೆರೆದ ಕನ್ನಡಿಗರು

Published:
Updated:

ಬೆಂಗಳೂರು: ತಮಿಳಿನ ಯುವ ನಟ ಸಿಂಬು ಮನವಿಗೆ ಸ್ಪಂಧಿಸಿರುವ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೌಹಾರ್ಧತೆಯನ್ನು ಮೆರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್‌ಗಳಲ್ಲಿ ತಮಿಳು ಸ್ನೇಹಿತರಿಗೆ  ನೀರು ನೀಡುತ್ತಿರುವ ಫೋಟೊ ಮತ್ತು ವಿಡಿಯೊಗಳನ್ನು ಕನ್ನಡಿಗರು ಅಪ್‌ಲೋಡ್‌ ಮಾಡುತ್ತಿದ್ದಾರೆ. ಇದರ ಜತೆಗೆ #UniteForHumanity, #UniteForHumanity #Kannadigas #UnitForCauvery #CauveryMangementBoard #ISupportSimbu ಎಂಬ ಹ್ಯಾಶ್ ಟ್ಯಾಗ್‌ಗಳನ್ನು ಹಾಕುತ್ತಿದ್ದಾರೆ.

ಎರಡು ದಿನಗಳ ಹಿಂದೆ ಮಾಡಿದ ಭಾಷಣದಲ್ಲಿ, ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ನಾಯಕರು ಮತ್ತು ಸಿನಿಮಾ ನಟರು ರಾಜಕೀಯ ಮಾಡಬಾರದು ಎಂದು ಸಿಂಬು ಮನವಿ ಮಾಡಿದ್ದಾರೆ. ಇದೇ ವೇಳೆ ಅವರು ನೀರು ಇದ್ದರೆ ಯಾರು ತಾನೇ ಕೊಡುವುದಿಲ್ಲ, ಕರ್ನಾಟಕ ಮಾತೆ ತಮಿಳನಿಗಾಗಿ ಒಂದು ಲೋಟ ನೀರು ಕೊಡುವೆಯಾ ಎಂದು ಮನವಿ ಮಾಡಿದ್ದರು. ಇದಕ್ಕೆ ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಸಿಂಬು ಮನವಿಗೆ ಪ್ರತಿಕ್ರಿಯಿಸುತ್ತಿರುವ ಕನ್ನಡಿಗರು, ನಮ್ಮ ಅಣೆಕಟ್ಟೆಗಳಲ್ಲಿ ನೀರು ಇದ್ದರೆ ತಮಿಳು ಸ್ನೇಹಿತರಿಗೆ ನಾವು ನೀರು ಹರಿಸಲು ಸದಾ ಸಿದ್ದ, ಆದರೆ ನಮಗೆ ನೀರು ಸಾಲುತ್ತಿಲ್ಲವಾದ್ದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ, ಆದರೂ ನಾವು ಕಷ್ಟಕಾಲದಲ್ಲಿ ತಮಿಳು ಸಹೋದರರನ್ನು ಕೈಬಿಡುವುದಿಲ್ಲ ಎಂಬ ನೂರಾರು ಪೋಸ್ಟ್‌ಗಳು ಹರಿದಾಡುತ್ತಿವೆ.

ಇನ್ನು ಕೆಲವರು ಕಾವೇರಿ ವಿಚಾರದಲ್ಲಿ ರಾಜಕಾರಣಿಗಳು ಮತ್ತು ಹಿರಿಯ ಸಿನಿಮಾ ನಟರು ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಕೆಲವರು ತಗೋ ತಗೋ ಸಿಂಬು ಒಂದು ಲೋಟ ನೀರು ತೆಗೆದುಕೋ ಎಂಬ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ.

ಕನ್ನಡಿಗರು ಮತ್ತು ತಮಿಳರು ಅನೋನ್ಯವಾಗಿದ್ದಾರೆ ಆದರೆ ರಾಜಕಾರಣಿಗಳು ಈ ವಿಚಾರದಲ್ಲಿ ಹುಳಿ ಹಿಂಡುತ್ತಿದ್ದಾರೆ ಎಂದು ಕೆಲವರು ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry