‘ಮೂಲ ಸೌಲಭ್ಯ ವಂಚಿತ ತಾಲ್ಲೂಕು’

7

‘ಮೂಲ ಸೌಲಭ್ಯ ವಂಚಿತ ತಾಲ್ಲೂಕು’

Published:
Updated:

ಸಂತೇಮರಹಳ್ಳಿ: ಕೊಳ್ಳೇಗಾಲ ಕ್ಷೇತ್ರದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್.ಮಹೇಶ್ ಆರೋಪಿಸಿದರು.

ಸಮೀಪದ ಬಾಗಳಿ ಗ್ರಾಮದಲ್ಲಿ ಈಚೆಗೆ ನಡೆದ ಬಿಎಸ್‌ಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಲವಾರು ಸಮಸ್ಯೆಗಳಿಂದ ಕ್ಷೇತ್ರ ಹಿಂದುಳಿದಿದೆ. ಬದಲಾವಣೆ ಗಾಳಿ ಬೀಸಲಿ ಎಂದು ಹೇಳಿದರು.

ಬಾಗಳಿ ಗ್ರಾಮದ ನಾಗರಾಜಪ್ಪ, ಪ್ರಭು, ವೆಂಕಟೇಶ್, ಕೃಷ್ಣ, ಕುಮಾರ್, ನಾಗಶೆಟ್ಟಿ, ಮರಿಸ್ವಾಮಿ, ಮಸಣ ಶೆಟ್ಟಿ, ಪುಟ್ಟಯ್ಯ, ರಾಜು ಬಿಎಸ್‌ಪಿ ಸೇರ್ಪಡೆಗೊಂಡರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಗುರುರಾಜ್, ಶಂಕರಪ್ಪ, ಮಹದೇವನಾಯ್ಕ, ನಾಗರಾಜು, ಮಹೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry