ಅಶಾಂತಿ ಸೃಷ್ಟಿಸುವ ರಾಜಕೀಯ ಹೆಚ್ಚು ದಿನ ನಡೆಯದು: ಬೆಂಗಳೂರಿನಲ್ಲಿ ನಿತೀಶ್ ಕುಮಾರ್ ಹೇಳಿಕೆ

ಸೋಮವಾರ, ಮಾರ್ಚ್ 25, 2019
29 °C

ಅಶಾಂತಿ ಸೃಷ್ಟಿಸುವ ರಾಜಕೀಯ ಹೆಚ್ಚು ದಿನ ನಡೆಯದು: ಬೆಂಗಳೂರಿನಲ್ಲಿ ನಿತೀಶ್ ಕುಮಾರ್ ಹೇಳಿಕೆ

Published:
Updated:
ಅಶಾಂತಿ ಸೃಷ್ಟಿಸುವ ರಾಜಕೀಯ ಹೆಚ್ಚು ದಿನ ನಡೆಯದು: ಬೆಂಗಳೂರಿನಲ್ಲಿ ನಿತೀಶ್ ಕುಮಾರ್ ಹೇಳಿಕೆ

ಬೆಂಗಳೂರು: ಸಾಮಾಜಿಕ ಸಾಮರಸ್ಯ ಕದಡಿ ಅಶಾಂತಿ ಸೃಷ್ಟಿಸುವ ಮೂಲಕ ಮಾಡುವ ರಾಜಕೀಯ ಹೆಚ್ಚು ದಿನ ನಡೆಯದು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟರು.

ಸಂಯುಕ್ತ ಜನತಾದಳದ (ಜೆಡಿಯು) ವತಿಯಿಂದ ಇಲ್ಲಿ ಹಮ್ಮಿಕೊಳ್ಳಲಾಗಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸೈದ್ಧಾಂತಿಕ ರಾಜಕಾರಣಕ್ಕೆ ಈಗಲೂ ಭವಿಷ್ಯವಿದೆ. ಬಿಹಾರದಲ್ಲಿ ನಾವು ಎಂದೂ ಭ್ರಷ್ಟಾಚಾರದ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ರಾಜ್ಯದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ. ಸಾಮಾಜಿಕ ಸೌಹಾರ್ದ ರಕ್ಷಣೆ ವಿಚಾರದಲ್ಲೂ ನಮ್ಮ ನಿಲುವು ಸ್ಪಷ್ಟವಾಗಿದೆ’ ಎಂದರು.

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ‘ಹಸಿರು ಕರ್ನಾಟಕ, ಸಾವಯವ ಕರ್ನಾಟಕ ಹಾಗೂ ಸಾವಯವ ರಾಜಕಾರಣ ನಮ್ಮ ಧ್ಯೇಯ. ನಮ್ಮ ಸಹಕಾರ ಇಲ್ಲದೇ ಸರ್ಕಾರ ನಡೆಸಲು ಸಾಧ್ಯವಿಲ್ಲದ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘ಇದೇ 15ರಂದು ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. 2-3 ದಿನ ಬಿಟ್ಟು ಮತ್ತೊಂದು ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಗೆಲ್ಲುವ ಸಾಮರ್ಥ್ಯ ಇರುವವರನ್ನು ಗುರುತಿಸಿ ಕಣಕ್ಕಿಳಿಸುತ್ತೇವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry