ಮಂಗಳವಾರ, ಆಗಸ್ಟ್ 4, 2020
26 °C

‘ಭಾನು ಭೂಮಿ’ ಮದುವೆಗೆ ಮುಹೂರ್ತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭಾನು ಭೂಮಿ’ ಮದುವೆಗೆ ಮುಹೂರ್ತ!

ಚಿತ್ರರಂಗ ಮತ್ತು ಕಿರುತೆರೆಯಲ್ಲಿ 15 ವರ್ಷಗಳಿಂದಲೂ ಸಕ್ರಿಯರಾಗಿರುವ ಜೆ. ಕೆ. ಆದಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅವರು ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ‘ಭಾನು ವೆಡ್ಸ್ ಭೂಮಿ’ ಚಿತ್ರಕ್ಕೆ ಕಂಠೀರವ ಸ್ಟುಡಿಯೊದಲ್ಲಿ ಮುಹೂರ್ತ ನೆರವೇರಿದೆ.

ಗೋಕಾಕ್ ಮೂಲದ ಮರಳು ವ್ಯಾಪಾರಿ ಕಿಶೋರ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ನಾಯಕ ನಾಯಕಿಯರು ಸೂರ್ಯಪ್ರಭ್ ಮತ್ತು ರಶಿತಾ ಮಲ್ನಾಡ್. ಮೂಲತಃ ಐಟಿ ಉದ್ಯೋಗಿಯಾಗಿರುವ ಸೂರ್ಯಪ್ರಭ್ ಅವರು ಡಾ. ರಾಜ್‍ಕುಮಾರ್‌ ಅಭಿಮಾನಿ. ಐಟಿ ಉದ್ಯೋಗ ತೊರೆದು ಬಣ್ಣ ಹಚ್ಚಲೂ ರಾಜ್ ಪ್ರಭಾವವೇ ಕಾರಣ.

ಭಾನು ಮತ್ತು ಭೂಮಿಯನ್ನು ರೂಪಕವಾಗಿ ಬಳಸಿಕೊಂಡು ಅಪ್ಪಟ ನೆಲದ ಸೊಗಡಿನ ಪ್ರೇಮ ಕಥಾನಕವೊಂದನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕರು. ಇಡೀ ಕಥೆ ಮೈಸೂರಿನ ಭೂಮಿಕೆಯಲ್ಲಿ ಜರುಗುತ್ತದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಕೊಡಗು, ಸಕಲೇಶಪುರ ಮತ್ತು  ಕಾರವಾರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ. ಈ ಚಿತ್ರದ ನಾಲ್ಕು ಹಾಡುಗಳಿಗೆ ಲೋಕಿ ಸಂಗೀತ ನೀಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.